News

ಮಾಸ್ ಲುಕ್ ನಲ್ಲಿ ಪ್ರೇಕ್ಷಕರ ಎದುರು ಬಂದ ವಿನಯ್ ರಾಜ್ ಕುಮಾರ್

ಮಾಸ್ ಲುಕ್ ನಲ್ಲಿ ಪ್ರೇಕ್ಷಕರ ಎದುರು ಬಂದ ವಿನಯ್ ರಾಜ್ ಕುಮಾರ್
  • PublishedFebruary 18, 2022

ವಿನಯ್ ರಾಜ್ ಕುಮಾರ್ ಈಗಾಗಲೇ ಸಿದ್ಧಾರ್ಥ್,ರನ್ ಆಂಟನಿ, ಅನಂತು ವರ್ಸಸ್ ನುಸ್ರತ್ ಸಿನಿಮಾ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ ನಟ… ಇಲ್ಲಿ ತನಕ ಸಾಫ್ಟ್ ಆಗಿರೋ ಕ್ಯಾರೆಕ್ಟರ್ ಗಳಲ್ಲಿ ಮಿಂಚಿದ್ದ ವಿನಯ್ ಈಗ ಮಾಸ್ ಅಪೀರಿಯನ್ಸ್ ನಲ್ಲಿ ಪ್ರೇಕ್ಷಕರೆದುರು ಬರಲು ಸಜ್ಜಾಗಿದ್ದಾರೆ… ಹೌದು ವಿನಯ್ ರಾಜಕುಮಾರ್ ಅಭಿನಯದ ಪೆಪೆ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ ..

ಈ ಹಿಂದೆ ಎಂದು ಕಾಣಿಸಿಕೊಳ್ಳದ ರೀತಿಯಲ್ಲಿ ವಿನಯ್ ರಾಜ್ ಕುಮಾರ್ ಪೆಪೆ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ…ಸದ್ಯ ರಿಲೀಸ್ ಆಗಿರುವ ಟೀಸರ್ ನಲ್ಲಿ ಲುಂಗಿಯುಟ್ಟು ಕೈಯಲ್ಲಿ ಮಚ್ಚು ಹಿಡಿದು ರಾ ಲುಕ್ ನಲ್ಲಿ ವಿನಯ್ ಎಂಟ್ರಿಕೊಟ್ಟಿರೋದು ಪ್ರೇಕ್ಷಕರನ್ನ ಇಂಪ್ರೆಸ್ ಮಾಡಿದೆ..

ಪಿಆರ್ ಕೆ ಆಡಿಯೋ ದಲ್ಲಿ ಬಿಡುಗಡೆಯಾಗಿರುವ ಟೀಸರ್ ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ… Emotions do not mean anything in rivalry ಎನ್ನುವ ಟ್ಯಾಗ್ ಲೈನ್ ಇಟ್ಟುಕೊಂಡು ಚಿತ್ರದ ಪೋಸ್ಟರ್ ಕೂಡ ಬಿಡುಗಡೆಯಾಗಿದೆ… ಇನ್ನು ವಿನಯ್  ಈ ಸಿನಿಮಾದ ಮೂಲಕ ಇಂಡಸ್ಟ್ರಿಯಲ್ಲಿ ಬೇರೆಯದ್ದೇ ರೀತಿಯ ಅಭಿಮಾನಿ ಬಳಗವನ್ನ ಪಡೆದುಕೊಳ್ಳುತ್ತಾರೆ ಎನ್ನುವ ಟಾಕ್ ಈಗಾಗಲೇ ಶುರುವಾಗಿದೆ…

ಇನ್ನು ಪೇಪೆ ಸಿನಿಮಾದ ಕಥೆ  ಕಂಪ್ಲೀಟ್ ಆ್ಯಕ್ಷನ್ ಥ್ರಿಲ್ಲರ್ ನಿಂದ ಕೂಡಿದ್ದು… ಮಲೆನಾಡಿನಲ್ಲಿ ನಡೆಯುವ ಗ್ಯಾಂಗ್ ಸ್ಟರ್ ಗಳ ಕಥೆಯಾಗಿದೆ…  ಈ ಚಿತ್ರವನ್ನ ಶ್ರೀಲೇಶ್ ಎಸ್ ನಾಯರ್ ನಿರ್ದೇಶನ ಮಾಡಿದ್ದು ಸಿನಿಮಾವನ್ನ ಉದಯಶಂಕರ್ ನಿರ್ಮಾಣ ಮಾಡಿದ್ದಾರೆ… ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಟೀಸರ್ ನಲ್ಲಿ ಹೈಲೈಟ್ ಆಗಿದೆ … ಕ್ಯಾಮೆರಾ ವರ್ಕ್ ಕೂಡ ತುಂಬ ಚೆನ್ನಾಗಿ ಮೂಡಿಬಂದಿದ್ದು ಸದ್ಯ ಪೆಪೆ ಟೀಸರ್ ಸಿನಿಮಾ ಪ್ರೇಕ್ಷಕರಲ್ಲಿ  ಚಿತ್ರದ ಬಗ್ಗೆ ಹೆಚ್ಚು ನಿರೀಕ್ಷೆ ಹುಟ್ಟುಹಾಕಿದೆ …

Written By
Kannadapichhar

Leave a Reply

Your email address will not be published. Required fields are marked *