ಕಿಚ್ಚನ ಮಾತಿಗೆ ವಿಜಯಲಕ್ಷ್ಮಿ ದರ್ಶನ್ ಕೌಂಟರ್!
ದಾವಣಗೆರೆಯಲ್ಲಿ ನಡೆದ ದರ್ಶನ ಅಭಿಮಾನಿಗಳ ಭೇಟಿಯಲ್ಲಿ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಆಡಿರುವ ಮಾತುಗಳು ಈಗ ಸ್ಯಾಂಡಲ್ ವುಡ್ ನಲ್ಲಿ ಚರ್ಚೆಗೆ ಕಾರಣವಾಗಿದೆ.
ಅವರು ಸ್ಟೇಜ್ ನಲ್ಲಿ ಮೈಕ್ ಹಿಡಿದ ಕೂಡಲೇ ” ಕೆಲವೊಂದು ವ್ಯಕ್ತಿಗಳು ದರ್ಶನ್ ಅವರು ಇಲ್ದೇ ಇರುವಾಗ ಅವರ ಬಗ್ಗೆ, ಅವರ ಫ್ಯಾನ್ಸ್ಗಳ ಬಗ್ಗೆ ವೇದಿಕೆ ಮೇಲೆ ಹೋಗೋದು, ನಿಂತುಕೊಂಡು ಮಾತಾಡೋದು, ಚಾನೆಲ್ ನಲ್ಲಿ ಮಾತಾಡೋದು. ದರ್ಶನ್ ಅವರು ಇದ್ದಾಗ ಬೆಂಗಳೂರಲ್ಲಿ ಎಲ್ಲಿ ಇರ್ತಾರೆ ಅಂತ ಗೊತ್ತಾಗಲ್ಲ” ಎಂದು ಹೇಳಿದ್ದಾರೆ. ಜೊತೆಗೆ ಅಭಿಮಾನಿಗಳಿಗೆ ತಲೆಕೆಡಿಸ್ಕೊಬೇಡಿ ಎಂದಿದ್ದಾರೆ.
ಇಲ್ಲಿ ವಿಜಯಲಕ್ಷ್ಮಿಯವರು ಯಾರ ಹೆಸರನ್ನು ನೇರವಾಗಿ ಹೇಳದಿದ್ದರೂ ಅವರ “ದರ್ಶನ ಇಲ್ಲದಾಗ ಸ್ಟೇಜ್ ಮೇಲೆ ನಿತ್ಕೊಂಡು ಮಾತಾಡೋದು” ಎನ್ನುವ ಸ್ಟೇಟ್ ಮೆಂಟ್ ಸುದೀಪ್ ಅವರ ಮಾತಿಗೆ ಇದು ಪ್ರತ್ಯುತ್ತರ ನೀಡಿದ ರೀತಿ ಇದೆ. ಒಂದು ರೀತಿ ಎರಡು ನಟರ ಅಭಿಮಾನಿಗಳ ನಡುವೆ ಇರುವ ಸಂಘರ್ಷಕ್ಕೆ ಇನ್ನು ಹೆಚ್ಚಿನ ಪುಷ್ಠಿ ನೀಡಿದೆ.