ಫ್ಯಾನ್ಸ್ ನಡುವೆ ಭಾವುಕತೆಯಲ್ಲಿ ಡೆವಿಲ್ ಕಣ್ತುಂಬಿಕೊಂಡ ದರ್ಶನ್ ಪತ್ನಿ
ದರ್ಶನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಡೆವಿಲ್ ಈಗಾಗಲೇ ಥಿಯೇಟರ್ನಲ್ಲಿ ಬಿಡುಗಡೆಯಾಗಿದ್ದು, ದರ್ಶನ್ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಥಿಯೇಟರ್ ಗೆ ಬಂದು ಮೂವಿಯನ್ನು ವೀಕ್ಷಿಸುತ್ತಿದ್ದಾರೆ.
ಇದೇ ಸಮಯದಲ್ಲಿ ದರ್ಶನವರ ಪತ್ನಿ ವಿಜಯಲಕ್ಷ್ಮಿ ಅವರು ನರ್ತಕಿ ಥಿಯೇಟರ್ ನಲ್ಲಿ ಅಭಿಮಾನಿಗಳ ಜೊತೆ ಕುಳಿತು ಸಿನಿಮಾವನ್ನು ವೀಕ್ಷಿಸಿದರು. ಮುಖದಲ್ಲಿ ನಗು ಕಣ್ಣಲ್ಲಿ ನೀರು ಎಲ್ಲಾ ಭಾವನೆಗಳ ಜೊತೆಗೆ ಸಿನಿಮಾವನ್ನು ನೋಡಿದರು.
ಪ್ರತಿ ಬಾರಿ ದರ್ಶನ್ ಅವರು ತಮ್ಮ ಸಿನಿಮಾವನ್ನು ಅಭಿಮಾನಿಗಳ ಜೊತೆ ಕುಳಿತು ನೋಡುತ್ತಿದ್ದರು. ಇದೀಗ ಅದರ ಅನುಪಸ್ಥಿತಿಯಲ್ಲಿ ವಿಜಯಲಕ್ಷ್ಮಿ ಅವರು ಮಾತ್ರ ಅಭಿಮಾನಿಗಳೊಂದಿಗೆ ಕುಳಿತು ಸಿನಿಮಾವನ್ನು ನೋಡಿದ್ದಾರೆ.