ದರ್ಶನ್ಗೆ ಬೆನ್ನು ನೋವಿನಕ್ಕೆ ನರಕಯಾತನೆ ಅನುಭವ- ಪತ್ನಿ ವಿಜಯಲಕ್ಷ್ಮಿ
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಸಂದರ್ಭದಲ್ಲಿ ದರ್ಶನ್ ಅವರ ಬೆನ್ನು ನೋವಿನ ಬಗ್ಗೆ ಬಹಳಷ್ಟು ಚರ್ಚೆ ಆಗಿತ್ತು. ಅದನ್ನು ಪರಿಗಣಿಸಿ ಮಧ್ಯಂತರ ಜಾಮೀನನ್ನು ನೀಡಲಾಗಿತ್ತು.
ಈ ವಿಚಾರ ಸಂಬಂದಿಸಿ ಸಂದರ್ಶನದಲ್ಲಿ ಮಾತನಾಡಿರುವ ವಿಜಯಲಕ್ಷ್ಮಿ ದರ್ಶನ್ ಅವರಿಗೆ ಬೆನ್ನು ನೋವಿನ ಸಮಸ್ಯೆ ಇರುವುದು ಸತ್ಯ. ವೈದ್ಯರು ಸರ್ಜರಿ ಮಾಡಿಸಲು ಸೂಚಿಸಿದ್ದರು.ಆದರೆ ಸರ್ಜರಿ ಆದ ಮೇಲೆ ಒಂದು ವರೆ ವರ್ಷ ಬೆಡ್ ರೆಸ್ಟ್ ಅಲ್ಲಿ ಇರಬೇಕು ಎಂದು ಹೇಳಿದ್ದರಂತೆ,ಆದರೆ ಡೆವಿಲ್ ಸಿನಿಮಾದ ನಿರ್ದೇಶಕರಿಗೆ ಹಾಗೂ ನಿರ್ಮಾಪಕರಿಗೆ ಮಾತು ಕೊಟ್ಟಿದ್ದ ಕಾರಣಕ್ಕೆ ಶಸ್ತ್ರ ಚಿಕಿತ್ಸೆ ಯನ್ನು ಮುಂದೂಡಿದ್ದರು. ಜೊತೆಗೆ ಶೂಟಿಂಗ್ ಸಮಯದಲ್ಲಿ ದರ್ಶನ್ ಅವರು ನೋವು ತಡೆದುಕೊಳ್ಳುವ ಸಲುವಾಗಿ ಪೈನ್ ಕಿಲ್ಲರ್ ಹಾಗೂ ಮಾತ್ರೆಗಳನ್ನು ತೆಗೊಳುತ್ತಿದ್ದರು ಎಂಬುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಹಾಗಾಗಿ ದರ್ಶನ್ ಬೆನ್ನು ನೋವು ಇರುವುದೆಂದು ಹೇಳಿರುವುದು ಜಾಮೀನು ಪಡೆಯಲು ಮಾಡಿದ ನಾಟಕವಲ್ಲ ಎಂದು ಸಂದರ್ಶನ ದ ಮುಖಾಂತರ ನಾಟಕ ಎಂದಿದ್ದವರಿಗೆ ತಕ್ಕ ಉತ್ತರವನ್ನು ನೀಡಿದ್ದಾರೆ.