ಮದುವೆ ಸುದ್ದಿ ಬಗ್ಗೆ ಮೌನ ಮುರಿದ ವಿಜಯ ದೇವರಕೊಂಡ ಹೇಳಿದ್ದೇನು ಗೊತ್ತಾ ?
ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಬಹುಕಾಲದ ಸ್ನೇಹಿತರು.. ಇತ್ತೀಚೆಗಷ್ಟೇ ಇವರಿಬ್ಬರು ಇದೇ ವರ್ಷದಲ್ಲಿ ಸಪ್ತಪದಿ ತುಳಿದಿದ್ದಾರೆ ಎನ್ನುವ ಸುದ್ದಿ ಜೋರಾಗಿತ್ತು …ಸಿನಿಮಾ ಹೊರತಾಗಿ ದೇವರಕೊಂಡ ರಶ್ಮಿಕಾ ಮಂದಣ್ಣ ಇಬ್ಬರು ತುಂಬ ಒಳ್ಳೆ ಸ್ನೇಹಿತರಾಗಿದ್ದಾರೆ.. ಆಗಾಗ ಮೀಟ್ ಮಾಡುವುದು…ಒಂದಿಷ್ಟು ಸಮಯವನ್ನು ಒಟ್ಟಿಗೆ ಕಳೆಯೋದು ಇವೆಲ್ಲವೂ ಇಬ್ಬರ ಮಧ್ಯೆ ಕಾಮನ್ ಆಗಿದೆ….ಹಾಗಾಗಿ ಇಬ್ಬರು ಡೇಟ್ ಮಾಡುತ್ತಿದ್ದಾರೆ ಆದಷ್ಟು ಬೇಗ ಮದುವೆ ಆಗುತ್ತಾರೆ ಎನ್ನುವ ಸುದ್ದಿ ಹರಡುತ್ತಲೇ ಇರುತ್ತದೆ …

ಇನ್ನು ಇತ್ತೀಚೆಗಷ್ಟೇ ನಟಿ ರಶ್ಮಿಕಾ ಮಂದಣ್ಣ ತಮ್ಮ ಮದುವೆ ಬಗ್ಗೆ ಮಾತನಾಡಿದ್ದರು… ಮದುವೆ ಆಗಲು ನಾನಿನ್ನೂ ಚಿಕ್ಕವಳು ಅದಕ್ಕೆ ಸಮಯವಿದೆ ಎಂದಿದ್ದರು …ಈ ಸುದ್ದಿಯ ಬೆನ್ನಲ್ಲೇ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಮದುವೆ ಆಗಲಿದ್ದಾರಂತೆ ಇದೇ ವರ್ಷ ಇಬ್ಬರೂ ಸಪ್ತಪದಿ ತುಳಿಯಲಿದ್ದಾರೆ ಎಂಬ ಸುದ್ದಿ ಜೋರಾಗಿ ಕೇಳಿಬಂದಿತ್ತು… ಈ ವಿಷಯ ಕೇಳಿದ ನಟ ವಿಜಯ್ ದೇವರಕೊಂಡ ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ …

ಈ ಬಗ್ಗೆ ಟ್ವೀಟ್ ಮಾಡಿರುವ ವಿಜಯ್ ದೇವರಕೊಂಡ ಸದ್ಯ ಹರಡುತ್ತಿರುವ ಸುದ್ದಿ ನಾನ್ಸೆನ್ಸ್… ನಾವು ಕೇವಲ ಸ್ನೇಹಿತರಷ್ಟೆ ಎಂದು ಟ್ವೀಟ್ ಮಾಡಿದ್ದಾರೆ ..ಈ ಮೂಲಕ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಬಗ್ಗೆ ಹರಡುತ್ತಿರುವ ಸುದ್ದಿ ಗಾಸಿಪ್ ಗೆ ಫುಲ್ ಸ್ಟಾಪ್ ಇಟ್ಟಂತಾಗಿದೆ …ಇನ್ನು ವಿಜಯ್ ದೇವರಕೊಂಡ ಸದ್ಯ ತಮ್ಮ ಲೈಗರ್ ಸಿನಿಮಾದ ಚಿತ್ರೀಕರಣ ದಲ್ಲಿ ಬ್ಯೂಸಿ ಇದ್ದು… ರಶ್ಮಿಕಾ ಮಂದಣ್ಣ ತಮ್ಮ ಬಾಲಿವುಡ್ ಸಿನಿಮಾಗಳ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ ..
