News

‘ಮಾರ್ಟಿನ್’ ಚಿತ್ರದ ನಾಯಕಿಯಾಗಿ ‘ವೈಭವಿ ಶಾಂಡಿಲ್ಯ’ ಎಂಟ್ರಿ..!

‘ಮಾರ್ಟಿನ್’ ಚಿತ್ರದ ನಾಯಕಿಯಾಗಿ ‘ವೈಭವಿ ಶಾಂಡಿಲ್ಯ’ ಎಂಟ್ರಿ..!
  • PublishedDecember 8, 2021

‘ಮಾರ್ಟಿನ್’ ಚಿತ್ರಕ್ಕೆ ನಾಯಕಿಯಾಗಿ ನಟಿ ವೈಭವಿ ಶಾಂಡಿಲ್ಯ ಆಯ್ಕೆಯಾಗಿದ್ದಾರೆ ಎಂಬ ಗುಸು ಗುಸು ಗಾಂಧಿನಗರದಲ್ಲಿ ಜೋರಾಗಿ ಸದ್ದು ಮಾಡುತ್ತಿರುವಾಗಲೇ. ನಿರ್ದೇಶಕರಾದ ಎಪಿ ಅರ್ಜುನ್ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ..

‘ಅದ್ಧೂರಿ’ ಚಿತ್ರದ ನಂತರ ‘ಮಾರ್ಟಿನ್’ ಮೂಲಕ ಧ್ರುವ ಸರ್ಜಾ ಮತ್ತು ಎ.ಪಿ.ಅರ್ಜುನ್ ಎರಡನೇ ಬಾರಿಗೆ ಒಂದಾಗುತ್ತಿದ್ದು, ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ‘ಮಾರ್ಟಿನ್’ ಚಿತ್ರದ ಟೈಟಲ್ ಟೀಸರ್ ನೋಡಿದವರು ಧ್ರುವ ಸರ್ಜಾ ಅವರ ಖಡಕ್ ಲುಕ್, ಬಾಡಿ ಲಾಂಗ್ವೇಜ್, ಕೈಯಲ್ಲಿ ಕ್ರಾಸ್ ಚೈನ್ ಹಿಡಿದುಕೊಂಡಿರುವುದನ್ನು ನೋಡಿ, ಆ್ಯಕ್ಷನ್ ಪ್ರಿನ್ಸ್ ಅವರೇ ‘ಮಾರ್ಟಿನ್’ ಎಂದುಕೊಂಡಿದ್ದರು. ಆದರೆ ಈ ಚಿತ್ರದಲ್ಲಿ ನಾನು ಮಾರ್ಟಿನ್​ ಅಲ್ಲ. ಅದು ಯಾರು ಎಂಬುದು ಸಿನಿಮಾ ನೋಡಿದ ಮೇಲೆ ತಿಳಿಯಲಿದೆ. ಅದಕ್ಕಾಗಿಯೇ ಈ ಟೀಸರ್​ನಲ್ಲಿ Who is Martin ಎಂಬ ಡೈಲಾಗ್​ ಇದೆ’ ಎಂದು ಧ್ರುವ ಸರ್ಜಾ ಇತ್ತೀಚೆಗೆ ಹೇಳಿದ್ದರು.

‘ಮಾರ್ಟಿನ್’ ಸಿನಿಮಾದಲ್ಲಿ ನಟ ಧ್ರುವ ಸರ್ಜಾ ದ್ವಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ. ಇದು ನಿಜವೇ ಆಗಿದ್ದರೆ ಧ್ರುವ ಸರ್ಜಾ ಅಭಿಮಾನಿಗಳಿಗೆ ಡಬಲ್ ಧಮಾಕ ಸಿಗಲಿದೆ. ಎ ಪಿ ಅರ್ಜುನ್ ನಿರ್ದೇಶನದ, ಉದಯ್ ಕೆ ಮಹ್ತಾ ನಿರ್ಮಾಣದ ಚಿತ್ರ ಇದಾಗಿದ್ದು, ಈಗಾಗಲೇ ಚಿತ್ರಕ್ಕೆ ಮೊದಲ ಹಂತದ ಶೂಟಿಂಗ್ ಮುಗಿಸಿದ್ದಾರೆ. ಚಿತ್ರದಲ್ಲಿ ಮರಾಠಿ ಬೆಡಗಿ ವೈಭವಿ ಶಾಂಡಿಲ್ಯ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ದ್ವಿಪಾತ್ರದಲ್ಲಿ ಒಂದು ಪಾತ್ರ ಸೈನಿಕನ ಪಾತ್ರ ಎನ್ನಲಾಗಿದೆ.

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ‘ಪೊಗರು’ ಚಿತ್ರದ ನಂತರ ‘ಮಾರ್ಟಿನ್’ ಚಿತ್ರದಲ್ಲಿ ನಟಿಸುತ್ತಿದ್ದು, ನಿರ್ದೇಶಕ ಎ.ಪಿ ಅರ್ಜುನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ದಿನದಂದು ಭರ್ಜರಿಯಾಗಿ ಟೈಟಲ್ ಟೀಸರ್ ಕೂಡಾ ಲಾಂಚ್ ಆಗಿತ್ತು. ಈಗಾಗಲೇ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಧ್ರುವ ಸರ್ಜಾಗೆ ನಾಯಕಿ ಯಾರು ಎಂಬ ಪ್ರಶ್ನೆ ಮೂಡಿದೆ. ಹೌದು ‘ಮಾರ್ಟಿನ್’ ಚಿತ್ರಕ್ಕೆ ನಾಯಕಿಯಾಗಿ ನಟಿ ವೈಭವಿ ಶಾಂಡಿಲ್ಯ ಆಯ್ಕೆಯಾಗಿದ್ದಾರೆ ಎಂಬ ಗುಸು ಗುಸು ಗಾಂಧಿನಗರದಲ್ಲಿ ಜೋರಾಗಿ ಸದ್ದು ಮಾಡುತ್ತಿರುವಾಗಲೇ. ನಿರ್ದೇಶಕರಾದ ಎಪಿ ಅರ್ಜುನ್ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ..

ಮರಾಠಿ, ತೆಲುಗು, ತಮಿಳು ಸಿನಿಮಾಗಳಲ್ಲಿ ಹೆಸರು ಮಾಡಿರುವ ವೈಭವಿ ಶಾಂಡಿಲ್ಯ, ಶರಣ್ ಅಭಿನಯದ ‘ರಾಜ್ ವಿಷ್ಣು’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಪೋಸ್ಟ್‌ ಪ್ರೊಡಕ್ಷನ್ ಹಂತದಲ್ಲಿರುವ ಯೋಗರಾಜ್ ಭಟ್ ನಿರ್ದೇಶದ ‘ಗಾಳಿಪಟ 2’ ಚಿತ್ರದಲ್ಲೂ ವೈಭವಿ ಪವನ್‌ಗೆ  ನಾಯಕಿಯಾಗಿ ನಟಿಸುತ್ತಿದ್ದಾರೆ. ಇದನ್ನ ಚಿತ್ರತಂಡ ಕೂಡ ಖಚಿತಪಡಿಸಿದೆ ವೈಭವಿ ಶಾಂಡಿಲ್ಯ ಗೆ  ‘ಮಾರ್ಟಿನ್’ ಅವರ ಮೂರನೇ ಚಿತ್ರವಾಗಲಿದೆ. ತಾರಾಗಣ ವಿಚಾರದಲ್ಲಿ ‘ಮಾರ್ಟಿನ್’ ಚಿತ್ರ ತಂಡ ಗುಟ್ಟು ಕಾಪಾಡಿಕೊಂಡಿದ್ದು, ನಟ ಚಿಕ್ಕಣ್ಣ ಈ ಚಿತ್ರದಲ್ಲಿ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಔಟ್ ಅಂಡ್ ಔಟ್ ಕಮರ್ಶಿಯಲ್ ಆಕ್ಷನ್ ಥ್ರಿಲ್ಲರ್ ‘ಮಾರ್ಟಿನ್’ ಸಿನಿಮಾ ಕಾಲೇಜ್ ಬ್ಯಾಕ್‌ ಡ್ರಾಪ್‌ನಲ್ಲಿ ನಡೆಯುವ ಕಥೆಯಾಗಿದ್ದು, ಈ ಚಿತ್ರದಲ್ಲಿ ನವಿರಾದ ಪ್ರೇಮಕಥೆಯೂ ಇರಲಿದೆ. ಲವ್ ಸ್ಟೋರಿ ಹಾಗೂ ಥ್ರಿಲ್ಲರ್ ಅಂಶಗಳನ್ನು ಸೇರಿಸಿ ಚಿತ್ರಕಥೆಯನ್ನು ಸಿದ್ಧಪಡಿಸಲಾಗಿದೆ.  ಈ ಚಿತ್ರದಲ್ಲಿ ಸಸ್ಪೆನ್ಸ್-ಥ್ರಿಲ್ಲರ್ ಅಂಶಗಳಿದ್ದು, ‘ಅದ್ಧೂರಿ’ ಚಿತ್ರಕ್ಕಿಂತಲೂ ಡಿಫರೆಂಟ್ ಆಗಿರಲಿದೆ. ಇದರಲ್ಲಿ ಹೆಚ್ಚು ಡೈಲಾಗ್ಸ್ ಇರುವುದಿಲ್ಲ ಎಂದು ಧ್ರುವ ಸರ್ಜಾ ತಿಳಿಸಿದ್ದಾರೆ. ಏಕಕಾಲದಲ್ಲೇ ಬೆಂಗಳೂರು ಹಾಗೂ ಹೈದರಾಬಾದ್‍ನಲ್ಲಿ ಚಿತ್ರೀಕರಣ ನಡೆಯುತ್ತಿದೆ.

****

Written By
Kannadapichhar

Leave a Reply

Your email address will not be published. Required fields are marked *