ಹಿರಿಯ ನಟ ರಾಜೇಶ್ ನಿಧನ

ಕನ್ನಡ ಸಿನಿಮಾರಂಗದ ಹಿರಿಯ ನಟ ಕಲಾತಪಸ್ವಿ ರಾಜೇಶ್ ನಿಧನರಾಗಿದ್ದಾರೆ.. ನಟ ರಾಜೇಶ್ ಸುಮಾರು 1ತಿಂಗಳಿಂದ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಕಾರಣದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು… ಉಸಿರಾಟದ ತೊಂದರೆ ಹಾಗೂ ಬಹು ಅಂಗಾಂಗ ವೈಫಲ್ಯದಿಂದ ರಾಜೇಶ್ ಬಳಲುತ್ತಿದ್ದರು..
ಇತ್ತೀಚಿಗಷ್ಟೇ ರಾಜೇಶ್ ಅವರ ಆರೋಗ್ಯ ಸ್ಥಿತಿ ಸುಧಾರಿಸಿತ್ತು ಆದರೆ ನಿನ್ನೆ ಮಧ್ಯರಾತ್ರಿ ಉಸಿರಾಟದ ತೊಂದರೆಯಿಂದ ರಾಜೇಶ್ ಅಸುನೀಗಿದ್ದಾರೆ …
ರಾಜೇಶ್ ಅವರ ನಿಧನಕ್ಕೆ ಕನ್ನಡ ಸಿನಿಮಾರಂಗ ಕಂಬನಿ ಮಿಡಿದಿದ್ದು ಸದ್ಯ ವಿದ್ಯಾರಣ್ಯಪುರದಲ್ಲಿರುವ ಅವರ ಮನೆಯಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ
