ಹಿರಿಯ ನಟ ಲೋಹಿತಾಶ್ವ ನಿಧನ

ಕಳೆದ ಒಂದು ತಿಂಗಳಿನಿಂದ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಲೋಹಿತಾಶ್ವ ಇಂದು ಮಧ್ಯಾಹ್ನದ ವೇಳೆಗೆ ಇಹ ಲೋಕ ತ್ಯಜಿಸಿದ್ದಾರೆ. ಕುಮಾರಸ್ವಾಮಿ ಲೇಔಟ್ ನಲ್ಲಿರುವ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ನಟ ಲೋಹಿತಾಶ್ವ ಈಗ ಕೊನೆಯುಸಿರೆಳೆದಿದ್ದಾರೆ.
ತುಮಕೂರು ಬಳಿ ತೋಂಡಗೇರೆ ಗ್ರಾಮದಲ್ಲಿ ಜನಸಿದ್ದ, ಲೋಹಿತಾಶ್ವ ಅವರಿಗೆ ಮೂರುಜನ ಮಕ್ಕಳು.ಇಬ್ಬರು ಗಂಡು ಮಕ್ಕಳು ಒಬ್ಬರು ಹೆಣ್ಣು ಮಗಳು. ಶರತ್, ವಿನಯ್ ಸಾಹ, ರಾಹುಲ್ ಲೋಹಿತಾಶ್ವ ಅವರ ಮಕ್ಕಳು
ಬರಗೂರು ರಾಮಚಂದ್ರಪ್ಪ ಅವರ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಬಂದ ಲೋಹಿತಾಶ್ವ ಅವರ ಮೊದಲ ಕಮರ್ಷಿಯಲ್ ಸಿನಿಮಾ ಗೀತಾ.ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಶಂಕರ್ ನಾಗ್ ರಂಥಾ ಕನ್ನಡದ ಮಹಾನ್ ದಿಗ್ಗಜ ನಟರ ಜೊತೆ ನಟಿಸಿರುವ ಲೋಹಿತಾಶ್ವ, ಹಿರಿಯ ನಿರ್ದೇಶಕ ಬಿ ಸೋಮಶೇಖರ್ ಅವರ ಬಹುತೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಅಂಬರೀಶ್, ವಿಷ್ಣುವರ್ಧನ್, ಶಂಕರ್ ನಾಗ್ ಜೊತೆ ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಹಿರಿಯ ನಟ ಲೋಹಿತಾಶ್ವ ಅಣ್ಣಾವ್ರ ಜೊತೆ ಪರಶುರಾಮ, ಸಮಯದ ಗೊಂಬೆ ಸಿನಿಮಾಗಳಲ್ಲಿ ನಟಿಸಿದ್ದಾರೆ.