ʻವೇದʼ ಆಯುಧಗಳನ್ನ ಝಳಪಿಸೋ ಟೀಸರ್

ಸೆಂಚುರಿ ಸ್ಟಾರ್ ಡಾ.ಶಿವರಾಜ್‌ಕುಮಾರ್ ಅಭಿನಯದ 125ನೇ ಸಿನಿಮಾ ವೇದ ಟೀಸರ್ ರಿಲೀಸ್ ಆಗಿದೆ. 1977ರ ಕಥೆಯನ್ನು ಹೇಳುವ ವೇದ ಸಿನಿಮಾದಲ್ಲಿ ಬಳಸಿರೋ ಆಯುಧಗಳನ್ನ ಪರಿಚಯಿಸೋ ಟೀಸರ್ ಈಗ ರಿಲೀಸ್ ಆಗಿದೆ. ಡಾ.ಶಿವರಾಜ್‌ಕುಮಾರ್ ಹೋಮ್ ಬ್ಯಾನರ್ ಗೀತಾ ಪಿಚ್ಚರ್ಸ್ ಹಾಗೂ ಜೀ ಸ್ಟುಡಿಯೋಸ್ ನಿರ್ಮಾಣ ಮಾಡ್ತಿರೋ ಸಿನಿಮಾಕ್ಕೆ ಶಿವಣ್ಣನ ಸೂಪರ್ ಹಿಟ್ ಸಿನಿಮಾಗಳ ನಿರ್ದೇಶಕ ಎ ಹರ್ಷ ಆಕ್ಷನ್ ಕಟ್ ಹೇಳ್ತಾ ಇದ್ದಾರೆ. ಇತಿಹಾಸದ ಕಥೆಯೊಂದನ್ನು ಹೇಳೋಕೆ ಹೊರಟಿರೋ ಸಿನಿಮಾದಲ್ಲಿ ಕಲ್ಲು, ಬೆಂಕಿಯ ಜೊತೆಗೆ ಯಾವೆಲ್ಲಾ ಆಯುಧಗಳು ಅಬ್ಬರಿಸಲಿವೆ ಅನ್ನೋದನ್ನ ಟೀಸರ್ ನಲ್ಲಿ ತೋರಿಸಲಾಗಿದೆ. ಈ ಸಿನಿಮಾ ಮೂಲಕ ಶಿವಣ್ಣನ ಇನ್ನೊಂದು ಬ್ರಾಂಡ್ ನ್ಯೂ ಲುಕ್ ಅಭಿಮಾನಿಗಳನ್ನ ರಂಜಿಸಲಿದೆ. ಟೀಸರ್ ಇಲ್ಲಿದೆ