ಅತಿದೊಡ್ಡ ಲೈಫ್ಸ್ಟೈಲ್, ಆಟೋಮೊಬೈಲ್ & ಫರ್ನಿಚರ್ ಎಕ್ಸ್ಪೋ ಇದೀಗ ನಿಮ್ಮ ಮುಂದೆ
ಪ್ರತೀ ವರ್ಷ ಸಾವಿರಾರು, ಲಕ್ಷಾಂತರ ಬೆಂಗಳೂರಿಗರನ್ನು ಸೆಳೆಯುತ್ತಾ ಬಂದಿರುವ ಮಹಾಮೇಳ ಈ ವರ್ಷ ಮತ್ತೆ ಸಿಲಿಕಾನ್ ಸಿಟ್ಟಿಗೆ ಮರಳಿದೆ. ಟಿವಿ9 ಕನ್ನಡ ವತಿಯಿಂದ ಲೈಫ್ಸ್ಟೈಲ್, ಆಟೊಮೊಬೈಲ್ ಮತ್ತು ಫರ್ನಿಚರ್ ಎಕ್ಸ್ಪೋ 2026 ಮೇಳ ನಡೆಯಲಿದೆ. ಅರಮನೆ ಮೈದಾನದಲ್ಲಿ ಮಾರ್ಚ್ 6ರಿಂದ ಮೂರು ದಿನಗಳ ಕಾಲ ನಡೆಯುವ ಈ ಮೆಗಾ ಎಕ್ಸ್ಪೋದಲ್ಲಿ ಹೊಚ್ಚ ಹೊಸ ಫ್ಯಾಷನ್, ವಾಹನಗಳು, ಗೃಹೋಪಕರಣಗಳನ್ನು ಕಾಣಬಹುದು.
ಟಿವಿ9 ಕನ್ನಡ ಲೈಫ್ಸ್ಟೈಲ್, ಆಟೊಮೊಬೈಲ್, ಫರ್ನಿಚರ್ ಎಕ್ಸ್ಪೋ ಕೆಲವಾರು ವರ್ಷಗಳಿಂದ ನಡೆಯುತ್ತಾ ಬಂದಿದೆ. ಹಿಂದಿನ ಆವೃತ್ತಿಯ ಮೇಳಗಳಿಗೆ ಭರ್ಜರಿ ಸ್ಪಂದನೆ ಸಿಕ್ಕಿದೆ. ಪ್ರತೀ ಎಕ್ಸ್ಪೋದಲ್ಲೂ ಸಾವಿರಾರು ಜನರು ಆಗಮಿಸಿ, ಲಾಭ ಪಡೆದಿದ್ದಾರೆ. ಕುಟುಂಬದವರು, ವೃತ್ತಿಪರರು ಮತ್ತು ಹೊಸ ಫ್ಯಾಷನ್ ಮತ್ತು ಗ್ಯಾಜೆಟ್ಗಳ ಪ್ರೇಮಿಗಳು ಎಲ್ಲರಿಗೂ ಹೇಳಿ ಮಾಡಿಸಿದಂತಹ ಪ್ಲಾಟ್ಫಾರ್ಮ್ ಇದು. ಈ ಎಕ್ಸ್ಪೋದಲ್ಲಿ ಆಕರ್ಷಣೀಯ ಎನಿಸುವ ಡಿಸ್ಕೌಂಟ್ಗಳು, ಡೀಲ್ಗಳು ನಿಮಗಾಗಿ ಲಭ್ಯ ಇರುತ್ತವೆ