‘ಟಾಕ್ಸಿಕ್’ ಟಿಕೆಟ್ ಏನಿದು?
‘ಟಾಕ್ಸಿಕ್’ ಇಡೀ ವಿಶ್ವವೇ ಎದುರು ನೋಡುತ್ತಿರುವ ಸಿನಿಮಾ. ಅದರಲ್ಲೂ ಯಶ್ ಅವರ ವೃತ್ತಿ ಜೀವನದಲ್ಲಿ ಅತ್ಯಂತ ದೊಡ್ಡ ಹೆಜ್ಜೆ ಇದು. ಗೀತು ಮೋಹನ್ ದಾಸ್ ನಿರ್ದೇಶನದ ಈ ಸಿನಿಮಾದ ಬಗ್ಗೆ ಕುತೂಹಲ ದಿನೇ ದಿನೇ ಹೆಚ್ಚಾಗುತ್ತಿದೆ.
ನಿನ್ನೆ ಅಷ್ಟೇ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಅದ್ರಲ್ಲಿ ಇದ್ದಂತಹ ಯಶ್ ಅವ್ರ ಒಂದು ಲುಕ್ ಭಾರಿ ಚರ್ಚೆಗೆ ಕಾರಣವಾಗಿತ್ತು. ಇದೀಗ ಆ ಲುಕ್ ನ ಬಗ್ಗೆ ಸಿನಿಮಾ ತಂಡ ಪೋಸ್ಟರ್ ಬಿಟ್ಟಿದೆ. ಪೋಸ್ಟರ್ ನ ಪ್ರಕಾರ ಟಿಕೆಟ್ ಎನ್ನುವ ಪಾತ್ರ ಇದಾಗಿದೆ. ಇದು ಇನ್ನು ಹೆಚ್ಚು ಕುತೂಹಲ ಮೂಡಿಸಿದೆ. ಕೆಲವರು ಸಿನಿಮಾದಲ್ಲಿ ಯಶ್ ತ್ರಿಬಲ್ ಕ್ಯಾರೆಕ್ಟರ್ ಅಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಆದ್ರೆ ಇದೆಲ್ಲದಕ್ಕೂ ಉತ್ತರ ಸಿಗೋದು ಮಾರ್ಚ್ 19 ರಂದು.