ಟಾಕ್ಸಿಕ್ ಟೀಸರ್ ದಾಖಲೆಯ ವೀವ್ಸ್ ಯಾವ ಭಾಷೆಯಲ್ಲಿ ಎಷ್ಟೆಷ್ಟು..?
Pallavi N Raj
ಭಾರತ ಸಿನಿಮಾರಂಗದ ಅತ್ಯಂತ ಬಹುನಿರೀಕ್ಷಿತ ಸಿನಿಮಾ ಟಾಕ್ಸಿಕ್ ಶುಕ್ರವಾರ 9:30ಕ್ಕೆ ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಟೀಸರ್ ಬಿಡುಗಡೆ ಆಗಿದ್ದು, ಟೀಸರ್ ಬಿಡುಗಡೆ ಆಗಿ 48 ಗಂಟೆಯಾಗಿದೆ.. ಈ ಅವಧಿಯಲ್ಲಿ ದಾಖಲೆ ಮೊತ್ತದ ಜನ ಸಿನಿಮಾದ ಟೀಸರ್ ವೀಕ್ಷಿಸಿದ್ದಾರೆ. ಟಾಕ್ಸಿಕ್ ಸಿನಿಮಾದ ಟೀಸರ್ ಕೇವಲ 24 ಗಂಟೆಗಳಲ್ಲಿ ಸುಮಾರು ಐದು ಕೋಟಿ ವೀವ್ಸ್ ಗಳಿಸಿಕೊಂಡಿದೆ.
ಹೌದು.. 1:55 ನಿಮಿಷದ ಟೀಸರ್ ನ ಟಾಕ್ಸಿಕ್ ಚಿತ್ರತಂಡ ಬಿಡುಗಡೆ ಮಾಡಿತ್ತು. ಟೀಸರ್, ಸಿನಿಮಾದ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ನ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಆಯ್ತು. ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ಟೀಸರ್ಗೆ ಮೆಚ್ಚುಗೆಗಳು ವ್ಯಕ್ತವಾಗಿವೆ. ಟೀಸರ್ ಬಿಡುಗಡೆ ಆದ ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ
ಟಾಕ್ಸಿಕ್ ಕನ್ನಡದ ಟೀಸರ್ ಬಿಡುಗಡೆ ಆದ ಜಸ್ಟ್ 24 ಗಂಟೆಗಳಲ್ಲಿ 74,19,923 ವೀವ್ಸ್ ಪಡೆದುಕೊಂಡಿದೆ. ಕನ್ನಡದ ಟೀಸರ್ಗಳ ಮಟ್ಟಿಗೆ ಇದೊಂದು ಹೊಸ ದಾಖಲೆಯೇ ಆಗಿದೆ. ಇನ್ನು ಇದೇ ಸಿನಿಮಾದ ತಮಿಳು ಟೀಸರ್ ಅದೇ ಅವಧಿಯಲ್ಲಿ 54.31 ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ. ಇನ್ನು ಮಲಯಾಳಂ ಟೀಸರ್ 27.63 ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ.
ಅತಿಹೆಚ್ಚು ವೀವ್ಸ್ ಪಡೆದುಕೊಂಡಿರೋದು ಹಿಂದಿ ಟೀಸರ್ ಟಾಕ್ಸಿಕ್ ಸಿನಿಮಾದ ಹಿಂದಿ ಟೀಸರ್. ಕೇವಲ 24 ಗಂಟೆಯಲ್ಲಿ 2.19 ಕೋಟಿಗೂ ಹೆಚ್ಚು ಜನ ಟಾಕ್ಸಿಕ್ ಸಿನಿಮಾದ ಹಿಂದಿ ಟೀಸರ್ ಅನ್ನು ವೀಕ್ಷಿಸಿದ್ದಾರೆ. ಎರಡನೇ ಸ್ಥಾನ ತೆಲುಗು ಟೀಸರ್ಗೆ. ಟಾಕ್ಸಿಕ್ ಸಿನಿಮಾದ ತೆಲುಗು ಟೀಸರ್ ಅನ್ನು ಕೇವಲ 24 ಗಂಟೆಯಲ್ಲಿ 1.10 ಕೋಟಿಗೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಅಲ್ಲಿಗೆ ಒಟ್ಟು ಸುಮಾರು 5 ಕೋಟಿ ಬಾರಿ ಟೀಸರ್ ವೀಕ್ಷಣೆ ಕಂಡಿದೆ.
ಒಟ್ನಲ್ಲಿ.. ಟಾಕ್ಸಿಕ್ ಸಿನಿಮಾದಲ್ಲಿ ಯಶ್ ದ್ವಿಪಾತ್ರದಲ್ಲಿ ನಟಿಸಲಿದ್ದಾರೆ ಸಿನಿಮಾನಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ನಾಯಕಿಯರಾಗಿ ನಟಿಸುತ್ತಿದ್ದಾರೆ. ಸಿನಿಮಾವನ್ನು ಗೀತು ಮೋಹನ್ದಾಸ್ ನಿರ್ದೇಶನ ಮಾಡಿದ್ದು, ಸಿನಿಮಾಕ್ಕೆ ಕೆವಿಎನ್ ಮತ್ತು ಯಶ್ ಅವರ ಮಾನ್ಸ್ಟರ್ ಮೈಂಡ್ಸ್ ಬಂಡವಾಳ ಹೂಡಿದೆ
ಟ್ರೈಲರ್ ಸಿನಿಮಾಗಾಗಿ ಫ್ಯಾನ್ಸ್ ಕಾದು ಕುಳಿತಿದ್ದಾರೆ..