new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

‘ಟಾಕ್ಸಿಕ್’ ರಿಲೀಸ್ ನಾಳೇನೇ!

‘ಟಾಕ್ಸಿಕ್’ ರಿಲೀಸ್ ನಾಳೇನೇ!
  • PublishedFebruary 19, 2026

ಟಾಕ್ಸಿಕ್… ಟಾಕ್ಸಿಕ್… ಟಾಕ್ಸಿಕ್… ಎಲ್ಲಾ ಕಡೆ ಒಂದೇ ಒಂದು ಸದ್ದು ಅಂದ್ರೆ ಅದು ಟಾಕ್ಸಿಕ್ ಸಿನಿಮಾದ ಬಗ್ಗೆ. ಯಶ್ ಅವರು ಕೆಜಿಎಫ್ ಚಾಪ್ಟರ್ 2 ಆದ ಮೇಲೆ ಯಾವ ಫಿಲಂ ಮಾಡ್ತಾರೆ ಅನ್ನೋ ಕುತೂಹಲಕ್ಕೆ ಬ್ರೇಕ್ ಬಿದದ್ದು ಟಾಕ್ಸಿಕ್ ಸಿನ್ಮಾದ ಅನೌನ್ಸ್ ಮೆಂಟ್ ಆದ್ಮೇಲೆ.ಯಶ್ ಅವರು ಮೊದಲನೆಯ ಭಾರಿಗೆ ಮಹಿಳಾ ನಿರ್ದೇಶನದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗೀತು ಮೋಹನ್ ದಾಸ್ ಅದ್ಭುತ ನಿರ್ದೇಶಕಿ. ಯಾವ ರೀತಿ ಯಶ್ ಅವರನ್ನು ತೋರಿಸಿರಬಹುದು ಎನ್ನುವ ಕುತೂಹಲವು ಯಶ್ ಅಭಿಮಾನಿಗಳಿಗಿದೆ.

ಸಿನಿಮಾದ ಎಲ್ಲಾ ನಟಿ ಮಣಿಯರ ಹಾಗೂ ರಾಯ ಪಾತ್ರದ ಪರಿಚಯ ಈಗಾಗಲೇ ಆಗಿತ್ತು. ಇನ್ನೇನು ಮುಂದಿನ ತಿಂಗಳು ಸಿನಿಮಾ ವರ್ಲ್ಡ್ ವೈಡ್ ರಿಲೀಸ್ ಆಗಲು ಸಿದ್ದವಾಗ್ತಿದೆ. ಹಾಗಾಗಿ ಟೀಸರ್ ಯಾವಾಗ ಬಿಡ್ತಾರೆ ಅನ್ನೋ ವಿಚಾರ ಚರ್ಚೆ ಆಗ್ತಿತ್ತು. ಈಗ ಅದಕ್ಕೆ ಸಿನಿಮಾ ತಂಡ ಬ್ರೇಕ್ ಹಾಕಿದ್ದು ನಾಳೆ ಬೆಳಗ್ಗೆ 9.35 ಕ್ಕೆ ಟೀಸರ್ ಬಿಡುಗಡೆಗೊಳ್ಳಲಿದೆ. ಈ ಮಾಹಿತಿಯನ್ನು ಸಿನಿಮಾತಂಡ ಅಧಿಕೃತವಾಗಿ ಘೋಷಿಸಿದೆ.

Written By
Kannada Picchar

Leave a Reply

Your email address will not be published. Required fields are marked *