TOXIC TEASER :ಹೇಳಿ ಹೊಡೆದ ಯಶ್!
ರಾಕಿಂಗ್ ಸ್ಟಾರ್ ಯಶ್ ನಟನೆಯ ʼಟಾಕ್ಸಿಕ್ʼ ಸಿನಿಮಾದ ಟೀಸರ್ ಇಂದು ಬಿಡುಗಡೆಯಾಗಿದೆ.ಮೊದಲ ಬಾರಿಗೆ ಒಂದು ಮಹಿಳಾ ನಿರ್ದೇಶನದಲ್ಲಿ ಕಾಣಿಸಿಕೊಳ್ಳಲಿರುವ ಯಶ್ ತಮ್ಮ ಹುಟ್ಟು ಹಬ್ಬದ ಅಂಗವಾಗಿ ತಮ್ಮ ಪಾತ್ರದ ಹೆಸರು ಹಾಗು ಸಣ್ಣ ತುಣುಕನ್ನು ಕೆವಿಎನ್ ಪ್ರೊಡಕ್ಷನ್ ನ ಯೌಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿದ್ದಾರೆ.
ಮಹಿಳಾ ನಿರ್ದೇಶನ
ಯಶ್ ಮೊದಲ ಬಾರಿಗೆ ಒಂದು ಮಹಿಳಾ ನಿರ್ದೇಶನದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಗೀತು ಮೋಹನ್ ದಾಸ್ ಯಶ್ ಅವರಿಗೆ ಆಕ್ಷನ್ ಕಟ್ ಹೇಳಿದ್ದಾರೆ.
ವಿಡಿಯೋದಲ್ಲಿ ಏನಿದೆ?
ಬಿಡುಗಡೆ ಮಾಡಿರುವ ತುಣುಕಿನ ಪ್ರಕಾರ ಯಶ್ ಅವರು ಸಿನಿಮಾದಲ್ಲಿ ರಾಯ ಅನ್ನುವ ಪಾತ್ರವನ್ನು ಪ್ಲೇ ಮಾಡಲಿದ್ದು ಪಾತ್ರವೇ ಟಾಕ್ಸಿಕ್ ಆಗಿದೆ.ಇನ್ನು ಚಿತ್ರವು ಪಕ್ಕ ಹಾಲಿವುಡ್ ವೈಬ್ ಕೊಡುತ್ತಿದ್ದು .ಈ ಬಾರಿ ಸಿನಿಮಾದ ಒಂದು ಸಣ್ಣ ಹಿಂಟ್ ಕೂಡ ಯಾರಿಗು ತಿಳಿಯಾದ ರೀತಿ ಇದೆ.ಯಶ್ ಅವರು 2022 ರ ನಂತರ 2026ರಲ್ಲೇ ತೆರೆ ಮೇಲೆ ಕಾಣುತ್ತಿರುವುದರಿಂದ ರಿಯಲ್ ಕಮ್ ಬ್ಯಾಕ್ ಅಂದ್ರೆ ಏನು ಅಂತ ತಿಳಿಸೋ ರೇಂಜ್ ಗಿದೆ.ಹಾಗಾಗಿ 19 ಮಾರ್ಚ್ ಬಾಕ್ಸ್ ಆಫಿಸ್ ಉಡೀಸ್ ಆಗೋದಂತ್ತು ಪಕ್ಕ ಅನ್ನೋದು ಕನ್ಫರ್ಮ್.
ಯಶ್ ತಾವು ಏನ್ ಹೇಳ್ತಾರೋ ಅದನ್ನ ಮಾಡೇ ಮಾಡ್ತಾರೆ ಅನ್ನೋದು ಎಲ್ಲರಿಗು ತಿಳಿದಿರೋ ವಿಷಯ.ಆರು ಭಾಷೆಯಲ್ಲಿ ಬರುತ್ತಿರುವ ಈ ಸಿನಿಮಾ ಈಗಾಗಲೇ ಪೋಸ್ಟರ್ ಗಳಿಂದ ಭಾರಿ ಸದ್ದು ಮಾಡಿತ್ತು.ಈ ಒಂದು ವೀಡಿಯೋ ಇನ್ನು ಕುತೂಹಲವನ್ನು ಹೆಚ್ಚಿಸಿದೆ.
c