new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಇಟ್ಸ್ ಓವರ್: ಇನ್ಮೇಲೇನಿದ್ರೂ ‘ಟಾಕ್ಸಿಕ್’ ದೇ ಹವಾ

ಇಟ್ಸ್ ಓವರ್: ಇನ್ಮೇಲೇನಿದ್ರೂ ‘ಟಾಕ್ಸಿಕ್’ ದೇ ಹವಾ
  • PublishedFebruary 21, 2026

ಟಾಕ್ಸಿಕ್… ಈಗಾಗಲೇ ಅದ್ವಿತೀಯ ದಾಖಲೆಗಳನ್ನ ಮಾಡಿರುವ ಬಹು ನಿರೀಕ್ಷಿತ ಸಿನಿಮಾ. ಮಾರ್ಚ್ 19 ರಂದು ಸಿನಿ ರಂಗವನ್ನು ಆಳೋಕೆ ರಾಯ ಬರ್ತಿದ್ದಾನೆ. ಸಿನಿಮಾ ಘೋಷಣೆ ಆಗಿರುವ ದಿನದಿಂದ ಹಿಡಿದು ಇಲ್ಲಿಯವರೆಗೂ ಪ್ರತಿಯೊಂದು ಹಂತದಲ್ಲೂ ಸದ್ದು ಮಾಡ್ತಿದೆ.

ಗೀತು ಮೋಹನ್ ದಾಸ್ ನಿರ್ದೇಶನದ ಜೊತೆಗೆ ಯಶ್ ಅವರು ಸಿನಿಮಾ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ವಿಷ್ಯ ತಿಳಿದಾಗಿನಿಂದ ಯಾವ ರೇಂಜ್ ಗೆ ಇರ್ಬೋದು ಸಿನಿಮಾ ಅನ್ನೋ ಮಾತುಗಳು ಕೇಳಿ ಬಂದಿವೆ. ಅಷ್ಟು ಉತ್ಸುಕರಾಗಿದ್ದಾರೆ ಯಶ್ ಅಭಿಮಾನಿಗಳು.ಸಿನಿಮಾದ ನಟಿಮಣಿಯರ ಪರಿಚಯ ಆಯ್ತು, ರಾಯನ ಪರಿಚಯವು ಆಯ್ತು ಆದ್ರೆ ಜನ ಕಾಯ್ತಿದ್ದದ್ದು ಸಿನ್ಮಾದ ಟೀಸರ್ ಮತ್ತು ಟ್ರೈಲರ್ ಗೆ. ಈಗ ಈ ಎರಡು ವಿಶ್ ಅಲ್ಲಿ ಒಂದು ಈಗಾಗಲೇ ಬಂದು ಯುದ್ಧಕ್ಕೆ ರೆಡಿ ಅಂತ ಹೇಳಾಗಿದೆ.

ಯಸ್, ಇಂದು ಯಶ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ, ಇಡೀ ಪ್ರಪಂಚವೇ ಎದುರು ನೋಡುತ್ತಿರುವ ಟಾಕ್ಸಿಕ್ ಸಿನ್ಮಾದ ಟೀಸರ್ ರಿಲೀಸ್ ಆಗಿದೆ. ಟೀಸರ್ ನೋಡಿದ್ಮೇಲೆ ಅನ್ಸಿದ್ದು ಒಂದೇ ‘ He is coming back to rule ‘.

Written By
Kannada Picchar

Leave a Reply

Your email address will not be published. Required fields are marked *