‘ಟಾಕ್ಸಿಕ್’ ಇಡೀ ಭಾರತವೇ ಎದುರು ನೋಡುತ್ತಿರುವ ಸಿನಿಮಾ. ಯಶ್ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾದಲ್ಲಿ ಬಹು ದೊಡ್ಡ ತಾರಾಗಣವಿದ್ದು, ಈಗಾಗಲೇ ಐದು ನಟಿ ಮಣಿಯರ ಫಸ್ಟ್ ಲುಕ್ ಹಾಗೂ ಪೋಸ್ಟರ್ ಬಾರಿ ಸದ್ದು ಮಾಡುತ್ತಿದೆ. ಇದಕ್ಕೆ ಚೆರಿ ಆನ್ ದಿ ಟಾಪ್ ಎನ್ನುವ ಹಾಗೆ ಯಶ್ ಅವರ ಜನ್ಮ ದಿನದಂದು ಯಶ್ ಅವರ ಪಾತ್ರವಾದ ರಾಯನ ಪರಿಚಯದ ವಿಡಿಯೋ ಬಿಟ್ಟಿದ್ದರು.

ಆಗಿನಿಂದ ಮುಂಚೆಗಿಂತ ಹೆಚ್ಚು ಅವರ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ.ಇದೀಗ ಸಿನಿಮಾದ ವಿತರಣೆ ಹಕ್ಕನ್ನು ಪಡೆಯುತ್ತಾರೆ ಎನ್ನುವ ಕುತೂಹಲವಿತ್ತು. ಇದೀಗ ತೆಲಂಗಾಣ ಹಾಗೂ ಆಂಧ್ರ ದಲ್ಲಿ ವಿತರಣಾ ಹಕ್ಕುಗಳನ್ನು ದಿಲ್ ರಾಜು ಅವರ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ (SVC) ₹120 ಕೋಟಿಗಳಿಗೆ ಖರೀದಿಸಿದ್ದು, ಇದು ತೆಲುಗು ಮೂಲದ್ದಲ್ಲದ ಚಿತ್ರವೊಂದರ ಅತಿದೊಡ್ಡ ದಾಖಲೆ ಒಪ್ಪಂದವಾಗಿದೆ.

ಮಾರ್ಚ್ 19ರಂದು ಬಿಡುಗಡೆಗೆ ಸಜ್ಜಾಗಿರುವ ಟಾಕ್ಸಿಕ್ ಚಿತ್ರವು ಈಗಾಗಲೇ ಟೀಸರ್, ಟ್ರೈಲರ್ ಬಿಡದೇನೆ ಇಷ್ಟು ಸದ್ದು ಮಾಡಿದೆ ಅಂದ್ರೆ ಇನ್ನು ಉಳ್ದಿರೋ ಅಪ್ಡೇಟ್ ಗೆ ಸೌಂಡ್ ಎಷ್ಟಿರಬೇಡ.

Written By
Kannada Picchar

Leave a Reply

Your email address will not be published. Required fields are marked *