ಬಲಿಷ್ಠ ಸಂಸ್ಥೆಗಳ ಪಾಲದ ‘ಟಾಕ್ಸಿಕ್’ ಸಿನ್ಮಾದ ವಿತರಣಾ ಹಕ್ಕು!
ರಾಯನ ಅಬ್ಬರಕ್ಕೆ ಇನ್ನೇನು 21 ದಿನಗಳಷ್ಟೇ ಬಾಕಿ ಉಳಿದಿದೆ.ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಬಹು ನಿರೀಕ್ಷಿತ ಸಿನ್ಮಾ ‘ಟಾಕ್ಸಿಕ್’ ದಿನಕ್ಕೊಂದು ವಿಚಾರಕ್ಕೆ ಸದ್ದು ಮಾಡುತ್ತಿದ್ದೆ.ನಿನ್ನೆಯವರೆಗೆ ಚಿತ್ರದ ಪಾತ್ರಗಳ ವಿಚಾರವಾಗಿ ಸುದ್ದಿಯಲ್ಲಿತ್ತು.ಈಗ ಸಿನಿಮಾದ ವ್ಯವಹಾರದ ವಿಷ್ಯವಾಗಿ ಹಲ್ ಚಲ್ ಎಬ್ಬಿಸುತ್ತಿದೆ.
ಯಸ್, ಇಂದು ‘ಟಾಕ್ಸಿಕ್’ ಸಿನಿಮಾ ತಂಡವು ತಮಿಳು ನಾಡಿನ ವಿತರಣಾ ಹಕ್ಕಿನ ಬಗ್ಗೆ ದೊಡ್ಡ ಅಪ್ಡೇಟ್ ನೀಡಿದೆ. ‘ಟಾಕ್ಸಿಕ್’ ಚಿತ್ರದ ವಿತರಣಾ ಹಕ್ಕು ನಾಲ್ಕು ಸಂಸ್ಥೆಗಳ ಪಾಲಾಗಿದೆ.ಚಿತ್ರದ ತಮಿಳುನಾಡು ವಿತರಣಾ ಹಕ್ಕುಗಳು ಬರೋಬ್ಬರಿ ₹63 ಕೋಟಿ ಮುಂಗಡ ಹಣಕ್ಕೆ ಮಾರಾಟವಾಗುವ ಮೂಲಕ ವಾಣಿಜ್ಯ ವಲಯದಲ್ಲಿ ‘ಟಾಕ್ಸಿಕ್’ ಸಂಚಲನ ಮೂಡಿಸಿದೆ.ಈ ಮೂಲಕ ಇತ್ತೀಚಿನ ವರ್ಷಗಳಲ್ಲಿ ತಮಿಳುನಾಡಿನಲ್ಲಿ ನಡೆದ ದೊಡ್ಡ ವಿತರಣಾ ಒಪ್ಪಂದಗಳಲ್ಲಿ ಟಾಕ್ಸಿಕ್ ಕೂಡ ಒಂದಾಗಿದೆ.
ಬಲಿಷ್ಠ ವಿತರಣಾ ಸಂಸ್ಥೆಗಳ ಪಾಲಾಯ್ತು ‘ಟಾಕ್ಸಿಕ್’:
ಕೆಜಿಎಫ್ ಮೂಲಕ ತಮಿಳು ನಾಡಿನಲ್ಲಿ ಯಶ್ ತಮ್ಮದೇ ಚಾಪು ಮೂಡಿಸಿದ್ದಾರೆ.ಹಾಗಾಗಿ ತಮಿಳು ನಾಡಿನಾದ್ಯಂತ ವ್ಯವಸ್ಥಿತವಾಗಿ ಸಿನಿಮಾವನ್ನು ತಲುಪಿಸಲು ಪ್ರಬಲ ಸಂಸ್ಥೆ ಕೈಜೋಡಿಸಿದೆ .
ಚೆನ್ನೈ ಸಿಟಿಯಲ್ಲಿ ವಿತರಣಾ ಹಕ್ಕನ್ನು ಸ್ವರೂಪ್ ರೆಡ್ಡಿ ಅವರ ‘ಥಿಂಕ್ ಸ್ಟುಡಿಯೋಸ್’ (Think Studios),ಚೆಂಗಳ್ಪಟ್ಟುನಲ್ಲಿ ಟ್ರೈಡೆಂಟ್ ರವಿ ಅವರ ನೇತೃತ್ವದ ‘ವೈಟ್ ನೈಟ್ಸ್’ (White Nights) ಪಡೆದುಕೊಂಡಿದೆ. ಇನ್ನು ಕೊಯಮತ್ತೂರು, ಉತ್ತರ ಮತ್ತು ದಕ್ಷಿಣ ಆರ್ಕಾಟ್, ತಿರುನೆಲ್ವೇಲಿ ಮತ್ತು ಕನ್ಯಾಕುಮಾರಿಯ ವಿತರಣಾ ಹಕ್ಕನ್ನು ಶ್ರೀನಿವಾಸ್ ಅವರ ಎಸ್ ಪಿಕ್ಚರ್ ಪಾಲಾಗಿದೆ .ಜತೆಗೆ ಮಧುರೈ, ರಾಮನಾಡ್, ತಿರುಚಿ, ತಂಜಾವೂರು ಮತ್ತು ಸೇಲಂ ಭಾಗದ ಡಿಸ್ಟ್ರಿಬ್ಯೂಷನ್ ರೈಟ್ಸ್ 5 ಸ್ಟಾರ್ ಸೆಂಥಿಲ್ ಸಂಸ್ಥೆಗೆ ಸಿಕ್ಕಿದೆ.
ಒಟ್ಟಿನಲ್ಲಿ ಯಶ್ ನಟನೆಯ ‘ಟಾಕ್ಸಿಕ್’ ಚಿತ್ರವನ್ನು ತಮಿಳುನಾಡಿನಾದ್ಯಂತ ದೊಡ್ಡ ಮಟ್ಟದಲ್ಲಿ ಬಿಡುಗಡೆ ಹೊಂದಲಿದೆ ಅನ್ನೋದಂತು ಪಕ್ಕ. ಅನೇಕ ವರ್ಷಗಳ ಎಕ್ಸ್ಪೀರಿಯೆನ್ಸ್ ಇರುವ ಸಂಸ್ಥೆಗಳು ತಮಿಳುನಾಡಿನ ವಿತರಣಾ ಹಕ್ಕನ್ನು ಪಡೆದಿರುವುದು ಚಿತ್ರದ ಬಗ್ಗೆ ಇನ್ನು ಹೆಚ್ಚಿನ ಕುತೂಹಲವನ್ನು ಹುಟ್ಟಿಸಿದೆ.