ಯಶ್ ಗುಣಗಾನ ಮಾಡಿದ ಗೀತು ಮೋಹನ್ ದಾಸ್!
ಟಾಕ್ಸಿಕ್ ಸಿನಿಮಾದ ನಿರ್ದೇಶಕಿ ಗೀತು ಮೋಹನ್ ದಾಸ್, ಯಶ್ ಅವರ ಹುಟ್ಟಿದ ದಿನದ ಅಂಗವಾಗಿ ಅವ್ರಿಗೆ ಅವರ ಗುಣ ಗಾನದ ಜೊತೆಗೆ ವಿಶ್ ಮಾಡಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ “ಯಶ್ ಅಂದ್ರೆ ಬರಿ ಸೂಪರ್ ಸ್ಟಾರ್ ಅಷ್ಟೇ ಅಲ್ಲ, ಅವರಲ್ಲಿರೋ ಆ ಪ್ರತಿಭೆ ನಿಜಕ್ಕೂ ಅದ್ಭುತ. ‘ಟಾಕ್ಸಿಕ್’ ಸಿನಿಮಾದಲ್ಲಿ ಅವರು ಮಾಡಿರೋ ಕೆಲಸ ನೋಡಿ ನನಗೆ ತುಂಬಾ ಹೆಮ್ಮೆ ಆಗ್ತಿದೆ. ಅವರು ಬರಿ ನಟನೆ ಮಾಡಿಲ್ಲ, ಆ ಪಾತ್ರಕ್ಕೆ ಜೀವ ತುಂಬಿದ್ದಾರೆ. ಶೂಟಿಂಗ್ ಸೆಟ್‌ನಲ್ಲಿ ಅವರು ತೋರುತ್ತಿದ್ದ ಆ ಶಿಸ್ತು ಮತ್ತು ಕಾಳಜಿ ನಿಜಕ್ಕೂ ಗ್ರೇಟ್.ಅವರು ಸುಮ್ಮನೆ ಹೇಳಿದ್ದನ್ನು ಮಾಡುವ ನಟನಲ್ಲ; ಕಥೆ ಬಗ್ಗೆ ಚರ್ಚೆ ಮಾಡ್ತಿದ್ರು, ಪ್ರಶ್ನೆ ಕೇಳ್ತಿದ್ರು, ಈ ಕಥೆಗೆ ಏನು ಬೇಕೋ ಅದನ್ನೇ ಮಾಡ್ತಿದ್ರು. ಇದರ ಜೊತೆಗೆ, ಒಬ್ಬ ಪ್ರೊಡ್ಯೂಸರ್ ಆಗಿ ಕೂಡ ನನಗೆ ಸಖತ್ ಸಪೋರ್ಟ್ ಮಾಡಿದ್ದಾರೆ. ಅವರ ಫೇಮ್ ನೋಡಿ ನಾವು ಅವರನ್ನ ಜಡ್ಜ್ ಮಾಡ್ತೀವಿ, ಆದ್ರೆ ಅವರ ವ್ಯಕ್ತಿತ್ವ ತುಂಬಾ ಆಳವಾಗಿದೆ. ಮುಂದಿನ ಡೈರೆಕ್ಟರ್‌ಗಳು ಕೂಡ ಅವರಲ್ಲಿರೋ ಈ ಟ್ಯಾಲೆಂಟ್ ಅನ್ನು ಚೆನ್ನಾಗಿ ಬಳಸಿಕೊಳ್ಳಲಿ ಅನ್ನೋದು ನನ್ನ ಆಸೆ. ಈ ಜರ್ನಿ ನಮ್ಮಿಬ್ಬರ ನಡುವಿನ ನಂಬಿಕೆ ಮತ್ತು ಒಳ್ಳೆ ಸ್ನೇಹದ ಮೇಲೆ ಶುರುವಾಗಿದ್ದು. ಕ್ಯಾಮೆರಾ ಆಫ್ ಆದ ಮೇಲೂ ಈ ಸ್ನೇಹ ನಂಗೆ ತುಂಬಾ ಸ್ಪೆಷಲ್ ಆಗಿ ಇರುತ್ತೆ. ಹ್ಯಾಪಿ ಬರ್ತ್ ಡೇ ಯಶ್!”ಎಂದು ಬರೆದು ಹಾಕಿಕೊಂಡಿದ್ದಾರೆ.