‘ಟಾಕ್ಸಿಕ್’ Craze AI ಮೊರೆ ಹೋದ ಯಶ್ Fans
ಯಶ್ ಅವರು ಅಭಿನಯಿಸುತ್ತಿರುವ ಟಾಕ್ಸಿಕ್ ಫಿಲಂ ಮುಂದಿನ ವರ್ಷ ತೆರೆ ಮೇಲೆ ಮೂಡಿ ಬರಲಿದೆ.ಗೀತು ಮೋಹನ್ ದಾಸ್ ಅವರು ನಿರ್ದೇಶಿಸುತ್ತಿರುವ ಯಶ್ ನಟನೆಯ 19ನೆಯ ಚಿತ್ರ ಇದಾಗಿದ್ದು.ಭಾರತೀಯ ಚಿತ್ರ ರಂಗವೇ ಎದುರು ನೋಡುತ್ತಿದೆ.ಅಭಿಮಾನಿಗಳು ಎರಡು ವರ್ಷದಿಂದ ಕಾಯುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಟಾಕ್ಸಿಕ್’ ಮೇಲೆ ಎಲ್ಲರ ಕಣ್ಣು ಬಿದ್ದಿದೆ.
ಯಶ್ ಹಾಗೂ ಕಿಯಾರ ಫೋಟೋ
ಇತ್ತೀಚಿಗಷ್ಟೇ ಯಶ್ ಹಾಗೂ ಕಿಯಾರ ಅಡ್ವಾಣಿ ಜೊತೆಗೆ ಶೂಟ್ ಮಾಡುತ್ತಿರುವ ಫೋಟೋ ಒಂದು ವೈರಲ್ ಆಗಿತ್ತು.ಟಾಕ್ಸಿಕ್ ಫಿಲಂ ಕಾಸ್ಟಿಂಗ್ ಬಗ್ಗೆ ಬಹಳ ಕುತೂಹಲವಿದ್ದು ಭಾರತವೇ ಜನವರಿ 9 ಯಾವಾಗ ಬರುತ್ತೆ ಎಂದು ಕಾದು ಕುಳಿತಿದ್ದಾರೆ.

ಎ.ಐ ಟಚ್ ಫಾರ್ ‘ಟಾಕ್ಸಿಕ್’
ಶೂಟಿಂಗ್ ಸೆಟ್ ನಿಂದ ಫೋಟೋ ವೈರಲ್ ಆಗುತ್ತಿದ್ದಂತೆ ಫ್ಯಾನ್ಸ್ ಅವರ ಕಾತುರತೆಯನ್ನು ಪೋಸ್ಟ್, ಕಾಮೆಂಟ್ ಗಳ ಮೂಲಕ ತೋರಿಸುತ್ತಿದ್ದಾರೆ. ಅದೇ ರೀತಿ ಯಶ್ ಅವರ ಫ್ಯಾನ್ ಮೇಡ್ ಎಐ ಫೋಟೋ ಸಕ್ಕತ್ ವೈರಲ್ ಆಗುತ್ತಿದೆ. ಥೀಯೇಟರ್ ಮುಂದೆ ಯಶ್ ಬಂದೂಕ ಹಿಡಿದಿರುವ ಎಐ ಫೋಟೋ ಸದ್ಯಕ್ಕೆ ಸದ್ದು ಮಾಡ್ತಿದೆ.