News

ನಾಳೆ ರಿಲೀಸ್ ಆಗ್ತಿವೆ ಮೂರು ಸಿನಿಮಾಗಳು..!

ನಾಳೆ ರಿಲೀಸ್ ಆಗ್ತಿವೆ ಮೂರು ಸಿನಿಮಾಗಳು..!
  • PublishedDecember 30, 2021

ಇದೀಗ ಬಂದ ಸುದ್ದಿಯ ಪ್ರಕಾರ ನಾಳೆಯ ಬಂದ್ ಅನ್ನು ವಾಪಸ್ ಪಡೆಯಲಾಗಿದ್ದು ಸಿನಿಮಾ ನಿರ್ಮಾಪರಿಗೆ ನಿರಾಳವಾಗಿದೆ ಮತ್ತು ಯಾವ ಅಡೆತಡೆಗಳು ಇಲ್ಲದಂತೆ ಸಿನಿ ಪ್ರೇಮಿಗಳು ತಮ್ಮ ಮೆಚ್ಚಿನ ಸಿನಿಮಾಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಶುಕ್ರವಾರ ಬಂತೆಂದರೆ ಚಂದನವನದಲ್ಲಿ ಹಬ್ಬದ ಸಂಭ್ರಮ, ಸಿನಿಮಾ ಜಾತ್ರೆಯೇ ನಡೆಯುತ್ತದೆ. ನಾಳೆ ಡಿಸೆಂಬರ್ 31 ಒಂದು ಕಡೆ ಕನ್ನಡ ಪರ ಸಂಘಟನೆಗಳು ಎಂಇಎಸ್ ಪುಂಡಾಟಿಕೆಯ ವಿರುದ್ದ ಕರೆ ನೀಡಿದ್ದ ಕರ್ನಾಟಕ ಬಂದ್ ಬಂದ್ ಅನ್ನು ವಾಪಸ್ ಪಡೆಯಲಾಗಿದೆ, ಚಲನಚಿತ್ರ ವಾಣಿಜ್ಯ ಮಂಡಳಿಯು ಬಂದ್ ಗೆ ನೈತಿಕ ಬೆಂಬಲ ಮಾತ್ರ ನೀಡುತ್ತೇವೆ ಮತ್ತು ಸಾಂಕೇತಿಕ ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿತ್ತು. ಇದೀಗ ಬಂದ ಸುದ್ದಿಯ ಪ್ರಕಾರ ನಾಳೆಯ ಬಂದ್ ಅನ್ನು ವಾಪಸ್ ಪಡೆಯಲಾಗಿದ್ದು ಸಿನಿಮಾ ನಿರ್ಮಾಪರಿಗೆ ನಿರಾಳವಾಗಿದೆ ಮತ್ತು ಯಾವ ಅಡೆತಡೆಗಳು ಇಲ್ಲದಂತೆ ಸಿನಿ ಪ್ರೇಮಿಗಳು ತಮ್ಮ ಮೆಚ್ಚಿನ ಸಿನಿಮಾಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಇದೆಲ್ಲದರ ಮಧ್ಯೆ ನಾಳೆ 3 ಚಿತ್ರಗಳು ಬಿಡುಗಡೆ ಆಗುತ್ತಿವೆ, ಅಜಯ್ ರಾವ್ ಮತ್ತು ಡಿಂಪಲ್ ಬೆಡಗಿ ರಚಿತಾ ರಾಮ್ ಅಭಿನಯಿಸಿರುವ ಲವ್ಯೂ ರಚ್ಚು ಈಗಾಗಲೆ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು ಟ್ರೇಲರ್ ಮತ್ತು ಹಾಡುಗಳಿಂದಲೇ ಬಾರಿ ಸದ್ದು ಮಾಡಿರುವ ಚಿತ್ರ ನಾಳೆ ತೆರೆಗೆ ಬರುತ್ತಿದೆ.

ಲವ್ಯೂ ರಚ್ಚು

ದೂದ್​ ಪೇಡ ದಿಗಂತ್ ಹಾಗೂ ಕವಿತಾ ಗೌಡ ಜೊತೆಯಾಗಿ ನಟಿಸಿರುವ ‘ಹುಟ್ಟು ಹಬ್ಬದ ಶುಭಾಶಯಗಳು’ ನಾಳೆ ರಿಲೀಸ್ ಆಗುತ್ತಿರುವ ಮತ್ತೊಂದು ಚಿತ್ರ. ಥ್ರಿಲ್ಲರ್ ಕಥಾಹಂದರವನ್ನು ಹೊಂದಿರುವ ಈ ಚಿತ್ರಕ್ಕೆ ಕ್ರಿಸ್ಟಲ್ ಪಾರ್ಕ್ ಬ್ಯಾನರ್​ನಡಿ ಟಿ. ಆರ್​ ಚಂದ್ರಶೇಖರ್ ನಿರ್ಮಾಣ ಮಾಡಿದ್ದಾರೆ.

ಹುಟ್ಟು ಹಬ್ಬದ ಶುಭಾಶಯಗಳು

ನಾಳೆ ಬಿಡುಗಡೆ ಆಗುತ್ತಿರುವ ಮತ್ತೊಂದು ಚಿತ್ರ ‘ಅರ್ಜುನ್ ಗೌಡ’ ಕೋಟಿ ನಿರ್ಮಾಪಕ ರಾಮು ಎಂದೆ ಖ್ಯಾತಿ ಪಡೆದಿದ್ದ ರಾಮು ಅವರು ನಿರ್ಮಾಣ ಮಾಡಿದ್ದ  ಚಿತ್ರ, ಆದ್ರೆ ರಾಮು ಕೊರೊನಾ ದಿಂದ ಮೃತಪಟ್ಟ ಕಾರಣ  ಚಿತ್ರವನ್ನು ರಾಮು ಪತ್ನಿ ಮಾಲಾಶ್ರೀ ಅವರು ಚಿತ್ರ ಬಿಡುಗಡೆಯ ಹೊಣೆ ಹೊತ್ತಿದ್ದಾರೆ.ಇತ್ತಿಚೆಗೆ ನಡೆದ ಪ್ರಿ ರಿಲೀಸ್ ಇವೆಂಟ್ ನಲ್ಲಿ ಕನ್ನಡ ಚಿತ್ರರಂಗದ ದಿಗ್ಗಜರೆಲ್ಲರೂ ರಾಮು ಕನಸಿನ ಅರ್ಜುನ್ ಗೌಡ ಚಿತ್ರಕ್ಕೆ ಸಾಥ್ ನೀಡಿದ್ರು.

ಅರ್ಜುನ್ ಗೌಡ

Written By
Kannadapichhar

Leave a Reply

Your email address will not be published. Required fields are marked *