ನಾಳೆ ಕೆಡಿ ಸಿನಿಮಾದ ನುಗ್ಗಿ ಹೊಡಿ ಸಾಂಗ್ ಬಿಡುಗಡೆ
ಆಕ್ಷನ್ ಪ್ರಿನ್ಸ್ ದ್ರುವ ಸರ್ಜಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಕೆಡಿ ದಿ ಡೆವಿಲ್’ ಸಿನಿಮಾದ ಮತ್ತೊಂದು ಹಾಡು ‘ನುಗ್ಗಿ ಹೊಡಿ’ ನಾಳೆ ಆನಂದ್ ಆಡಿಯೋ ಅಧಿಕೃತ ಯೌಟ್ಯೂಬ್ ಚಾನಲ್ ನಲ್ಲಿ ಸಂಜೆ 4.05 ಕ್ಕೆ ಬಿಡುಗಡೆಯಾಗಲಿದೆ.
ಸದ್ಯಕ್ಕೆ ಈ ಹಾಡಿನ ಎರಡನೇ ಪ್ರೋಮೊವನ್ನು ಚಿತ್ರ ತಂಡ ಬಿಟ್ಟಿದ್ದು ಈಗಾಗಲೇ ಕುತೂಹಲ ಮೂಡಿಸಿದೆ.ಈ ಹಾಡನ್ನು ಜೋಗಿ ಪ್ರೇಮ್ ಅವರು ಬರೆದಿದ್ದು ಅರ್ಜುನ್ ಜನ್ಯ ಅವರು ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ. ಈ ಹಾಡಿಗೆ ಶಂಕರ್ ಮಹಾದೇವನ್ ಅವ್ರು ಧನಿಯಾಗಿದ್ದಾರೆ.