ಈ ಋಣ ತೀರಿಸೋಕ್ಕೆ ದರ್ಶನ್ ಏಳು ಜನ್ಮ ತಾಳಬೇಕು – ಡೆವಿಲ್ ‘ವಿಜಯ’ ಸಂ’ದರ್ಶನ’
ನಟ ದರ್ಶನ್ ಅವರ ಬಂಧನದ ನಂತರ ಮೊದಲ ಬಾರಿಗೆ ಅವರ ಪತ್ನಿ ವಿಜಯಲಕ್ಷ್ಮಿ ಸಂದರ್ಶನ ನೀಡಿದ್ದಾರೆ. ಡಿ ಕಂಪನಿಯ ಮುಖಾಂತರ ನಡೆದ ಸಂದರ್ಶನದಲ್ಲಿ ದರ್ಶನ್ ಅಭಿಮಾನಿಗಳಿಗೆ ಇದ್ದ ಪ್ರಶ್ನೆಗಳಿಗೆ ಉತ್ತರವನ್ನು ನೀಡಿದ್ದಾರೆ.
ದರ್ಶನ್ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಸಮಯದಲ್ಲಿ ಸಿನಿಮಾ ಬಿಡುಗಡೆಗೊಂಡಿದೆ. ಆದರೆ ಈ ಸಿನಿಮಾವನ್ನು ಸ್ವತಃ ಡಿಬಾಸ್ ಅಭಿಮಾನಿಗಳು ಮುಂದೆ ನಿಂತು ಪ್ರಚಾರನ ಮಾಡಿ ಹಬ್ಬದ ರೀತಿ ಸಿನಿಮಾವನ್ನು ಬರ ಮಾಡಿಕೊಂದಿದ್ದರು.
ಈ ವಿಷಯದ ಕುರಿತು ಮಾತನಾಡಿದ ವಿಜಯಲಕ್ಷ್ಮಿ ಇಷ್ಟು ಫ್ಯಾನ್ಸ್ ಅನ್ನು ಪಡಿಯಲು ದರ್ಶನ್ 25 ವರ್ಷ ಕಷ್ಟ ಪಟ್ಟಿದ್ದಾರೆ. ಹಾಗೇ ಅಭಿಮಾನಿಗಳ ಅಭಿಮಾನವನ್ನು ಹೊಗಳಿರುವ ಅವರು ” ದರ್ಶನ್ ಇಲ್ಲದೆ ಇದ್ರು ಅವರನ್ನು ಅವರ ಸಿನಿಮಾವನ್ನು ಅಭಿಮಾನಿಗಳು ತಲೆ ಮೇಲೆ ಇಟ್ಟು ಮೆರಿಸ್ತಾರೆ ಅನ್ನೋದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಾಗಿಲ್ಲ” ಎಂದು ಹೇಳಿದ್ದಾರೆ.
ಜೊತೆಗೆ ಅಭಿಮಾನಿಗಳ ಎಲ್ಲಾ ಯೋಜನೆಗಳನ್ನು ದರ್ಶನ್ ಅವರನ್ನು ಭೇಟಿ ಮಾಡಲು ಹೋದಾಗ ಹೇಳಿದ್ದಾರೆ, ಆ ವಿಚಾರದಿಂದ ದರ್ಶನ್ ಅವರು ಖುಷಿ ಪಟ್ಟಿದ್ದಾರೆ ಎನ್ನುವ ಮಾಹಿತಿಯನ್ನು ಅಭಿಮಾನಿಗಳಿಗೆ ನೀಡಿದ್ದಾರೆ.
ಅದೇ ರೀತಿ ದುಡ್ಡು ಕೊಟ್ಟು ಪ್ರಚಾರ ಮಾಡಿಸ್ತಿದ್ದಾರೆ ಅನ್ನೋ ಆರೋಪಕ್ಕೆ ಉತ್ತರ ನೀಡಿರೋ ವಿಜಯಲಕ್ಷ್ಮಿ “ನಾನಾಗಲಿ ದರ್ಶನ್ ಆಗಲಿ ಅವರ ಫ್ಯಾನ್ಸ್ ಗೆ ಏನೂ ಹೇಳಲ್ಲ ಎಲ್ಲಾ ಅವರಾಗೆ ಅವರು ಕಷ್ಟ ಪಟ್ಟು ದುಡಿದಿರುವ ದುಡ್ಡಲ್ಲಿ ಮಾಡ್ತಿದ್ದಾರೆ. ಈ ಋಣನ ತೀರಿಸಬೇಕಾದ್ರೆ ದರ್ಶನ್ ಏಳು ಜನ್ಮ ತಾಳಬೇಕು” ಎಂದು ಹೇಳುತ್ತಾ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ.