ತೀರ್ಥ ರೂಪ ತಂದೆಯವರಿಗೆ ಸಿನಿಮಾ ಹೇಗಿದೆ?
ರಾಮೇನ ಹಳ್ಳಿ ಜಗನ್ನಾಥ ಅವರ ನಿರ್ದೇಶನದಲ್ಲಿ ಮೂಡಿ ಬಂದ ತೀರ್ಥ ರೂಪ ತಂದೆಯವರಿಗೆ ಚಿತ್ರ ಇಂದು ರಾಜ್ಯದಾದ್ಯಂತ ಇಂದು ಬಿಡುಗಡೆಯಾಗಿದೆ. 2026 ಮೊದಲ ಸಿನಿಮಾ ಇದಾಗಿದ್ದರಿಂದ ಸಿನಿ ಪ್ರೇಕ್ಷಕರಿಗೆ ಬಹಳ ಕುತೂಹಲವು ಇತ್ತು. ಹಾಗಾದ್ರೆ ಸಿನಿಮಾ ಹೇಗಿದೆ?
ಮೊದಲನೆಯದಾಗಿ ಈ ಚಿತ್ರವು ಒಂದು ಬ್ಯೂಟಿಫುಲ್ ಕಂಟೆಂಟ್ ಇರುವ ಸಿನಿಮಾ. ಚಿತ್ರದಲ್ಲಿ ನಾಯಕ ನಟನಾಗಿ ಮಿಂಚಿರುವ ನಿಹಾರ್ ಮುಖೇಶ್ ಪೃಥ್ವಿ ಎನ್ನುವ ಒಂದು ಸೀರಿಯಸ್ ಪಾತ್ರದಲ್ಲಿ ಮಿಂಚಿದ್ದಾರೆ. ಬಾಲ್ಯದಿಂದ ತಂದೆಯ ಪ್ರೀತಿ, ಕಾಳಜಿ ಯಾವುದು ದೊರಕಿರದ ಹುಡುಗ,ಜೊತೆಗೆ ಇದೆ ವಿಚಾರ ಸಂಬಂದಿ ಸಾಮಾಜ ಆಡುವ ಚುಚ್ಚುವ ಮಾತುಗಳು ಹೇಗೆ ಒಬ್ಬ ವ್ಯಕ್ತಿ ಮೇಲೆ ಪರಿಣಾಮ ಬೀಳುತ್ತೆ ಎನ್ನುವದನ್ನು ಅದ್ಭುತವಾಗಿ ತೋರಿಸಿದ್ದಾರೆ.ಇನ್ನೊಂದು ಕಡೆ ಅದೇ
ಈ ಚಿತ್ರದಲ್ಲಿ ಸಣ್ಣ ತಪ್ಪು ಒಂದು ಕುಟುಂಬವನ್ನು ಹೇಗೆ ದೂರ ಮಾಡಬಹುದು ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ.ಒಂದೊಳ್ಳೆ ಕಂಟೆಂಟ್ ಅನ್ನು ಈ ಸಿನಿಮಾದಲ್ಲಿ ಕಾಣಬಹುದು. ಸಿನಿಮಾ ತುಂಬಾ ಫ್ರೆಶ್ ಆಗಿ ಇದೆ. ಇದೆಲ್ಲದಕ್ಕಿಂತಲೂ ಸಿನಿಮಾಟೋಗ್ರಾಫಿ ಬಹಳ ಅದ್ಭುತವಾಗಿದೆ.
ಮಲೆನಾಡಿನ ಸೌಂದರ್ಯವನ್ನು ಬ್ಯೂಟಿಫುಲ್ ಆಗಿ ಸೆರೆ ಹಿಡಿದ್ದಿದ್ದಾರೆ.ಒಟ್ಟಿನಲ್ಲಿ ಭಾವನಾತ್ಮಕ ಸಿನಿಮಾ. ಜೊತೆಗೆ ಕಲಾವಿದರ ನಟನೆಯು ಪರ್ಫೆಕ್ಟ್ ಆಗಿ ಮೂಡಿ ಬಂದಿದೆ.ಸಿನಿಮಾ ನೋಡಿದ ವೀಕ್ಷಕರು ಹಾರ್ಟ್ ಟಚಿಂಗ್ ಸ್ಟೋರಿಯಾಗಿದ್ದು, ಫ್ಯಾಮಿಲಿ ಆಡಿಯೆನ್ಸ್ ಬಹಳ ಇಷ್ಟವಾಯಿತು ಎಂದು ಹಂಚಿಕೊಂಡಿದ್ದಾರೆ.