ಅಶೋಕ ಅಂಬಿಕಾಳ ಪ್ರಣಯ ಪದ ಯಾಕೋ ಯಾಕೋ..!?
ಸಪ್ತಮಿ ಗೌಡ ಹಾಗು ನೀನಾಸಂ ಸತೀಶ್ ಜೊತೆಗೆ ನಟಿಸುತ್ತಿರುವ ಮೊದಲ ಸಿನಿಮಾ ʼದಿ ರೈಸ್ ಆಫ್ ಅಶೋಕʼ .ಈ ಚಿತ್ರದ ಮೊದಲ ಹಾಡು ʼಏಲೋ ಏಲೋ ಮಾದೇವ ʼ ಬಿಡಗಡೆಯಾಗಿತ್ತು .ಇದೀಗ ಚಿತ್ರದ ಎರಡನೆಯ ಹಾಡು ʼಯಾಕೋ ಯಾಕೋʼ ಇಂದು ಬಿಡುಗಡೆಯಾಗಿದೆ.
ಈ ಮೊದಲು ಚಿತ್ರಕ್ಕೆ ಅಶೋಕ ಬ್ಲೇಡ್ ಎಂದು ಇತ್ತು .ಆದರೆ ಚಿತ್ರದ ನಿರ್ದೇಶಕರಾಗಿದಂತಹ ವಿನೋದ್ ಧೋಡಾಳೆ ಅವರ ನಿಧನದ ನಂತರ ಸಿನಿಮಾವನ್ನು ಸಂಕಲನಕಾರರಾದ ಮನು ಶೇಡ್ಗಾರ್ ಜವಬ್ದಾರಿ ಹೊತ್ತುಕೊಂಡು ಚಿತ್ರೀಕರಣ ಮುಗಿಸಿದ್ದಾರೆ.ಆ ಸಮಯದಲ್ಲಿ ಚಿತ್ರದ ಹೆಸರನ್ನು ʼದಿ ರೈಸ್ ಆಫ್ ಅಶೋಕʼ ಎಂದು ಮರು ನಾಮಕರಣ ಮಾಡಿದರು.
ಇಂದು ಸಿನಿಮಾದ ಇನ್ನಂದು ಹಾಡು ʼಯಾಕೋ ಯಾಕೋʼ ರಿಲೀಸ್ ಆಗಿದೆ.ಈ ಹಾಡನ್ನು ಪೂರ್ಣಚಂದ್ರ ತೇಜಸ್ವಿ ಅವರು ಬಹಳ ಅರ್ಥ ಪೂರ್ಣವಾಗಿ ಬರೆದಿದ್ದಾರೆ.