new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಧರೆಗುರುಳಲಿದೆ ಸಿನಿ ಪ್ರಿಯರ ಫೇವರಿಟ್ ಚಿತ್ರಮಂದಿರ

ಧರೆಗುರುಳಲಿದೆ ಸಿನಿ ಪ್ರಿಯರ ಫೇವರಿಟ್ ಚಿತ್ರಮಂದಿರ
  • PublishedDecember 15, 2025

ಕನ್ನಡ ಚಿತ್ರ ಮಂದಿರದ ಒಂದು ಸುವರ್ಣ ಅಧ್ಯಾಯ ಮುಗಿಯೋ ಸಮಯ ಬಂದಿದೆ. ಸುಮಾರು 50 ವರ್ಷಗಳ ಇತಿಹಾಸವಿರೋ ಊರ್ವಶಿ ಚಿತ್ರ ಮಂದಿರ ನೆಲ ಸಮ ಆಗೋ ಟೈಮ್ ಹತ್ತಿರವಾಗಿದೆ. ಸಿಂಗಲ್ ಸ್ಕ್ರೀನ್ ಇರೋ ಈ ಥೀಯೇಟರ್ ಫೆಬ್ರವರಿ 2026ಕ್ಕೆ ಮಾಯವಾಗ್ತಿದೆ.

ಯಾಕೆ ಥೀಯೇಟರ್ ಮುಚ್ಚುತ್ತಿದ್ದಾರೆ ?

ಇಷ್ಟು ವರ್ಷಗಳು ಜನರಿಗೆ ರಂಜಿಸ್ತಿದ್ದ ಈ ಚಿತ್ರ ಮಂದಿರ ಈಗ ಯಾಕೆ ಮರೆಯಾಗ್ತಿದೆ ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ.

1970 ರಲ್ಲಿ ಶ್ರೀನಿವಾಸ್ ಎಂಟರ್ಪ್ರೈಸಸ್ 45 ವರ್ಷಕ್ಕೆ ಭೂಮಿಯನ್ನು ಗುತ್ತಿಗೆ ಪಡೆದು ಚಿತ್ರ ಮಂದಿರ ನಿರ್ಮಾಣ ಮಾಡಿತ್ತು.ಇದರ ಅವಧಿ 2018 ರಲ್ಲಿ ಮುಕ್ತಾಯವಾಗಿತ್ತು. ಆದರೆ ಆಗಲು ಭೂಮಿಯನ್ನು ನೀಡದ ಕಾರಣ ಅತ್ತ ಭೂಮಾಲೀಕರು ಮತ್ತು ಇತ್ತ ಥಿಯೇಟರ್ ಮಾಲೀಕರು ಇಬ್ಬರು ಕೋರ್ಟ್ ಮೊರೆ ಹೋಗ್ತಾರೆ.

ಸಿವಿಲ್ ಕೋರ್ಟ್ ನಿಂದ ಕೇಸ್ ಹೈ ಕೋರ್ಟ್ ಗೆ ತಲುಪುತ್ತೆ.ಕೊನೆಗೆ ತೀರ್ಪು ಭೂ ಮಾಲೀಕನ ಪರವಾಗಿ ಬಂದಿದ್ದು, ತೀರ್ಪಿನ ಪ್ರಕಾರ ಫೆಬ್ರವರಿ 2026 ರ ಒಳಗೆ ಕಟ್ಟಡ ನೆಲಸಮ ಮಾಡಿ ಬಿಟ್ಟು ಕೊಡಬೇಕು ಹಾಗಾಗಿ 2026 ರ ಫೆಬ್ರವರಿ ನಂತರ ಊರ್ವಶಿ ಥೀಯೇಟರ್ ಮಾಯವಾಗುತ್ತದೆ.

50 ವರ್ಷಗಳಿಂದ ಎಲ್ಲಾ ಭಾಷೆಯ ಸಿನಿಮಾಗಳನ್ನು ಸಿನಿ ಪ್ರಿಯರು ನೋಡಿ ತುಂಬಿಕೊಂಡಿರುವ ಚಿತ್ರ ಮಂದಿರ, ಒಂದು ಕಾಲದಲ್ಲಿ ಇಡೀ ಸಿನಿಮಾ ಲೋಕಕ್ಕೆ ಹೊಸ ತನ ತಂದ ಥಿಯೇಟರ್ ಈಗ ಆ ನೆನಪನ್ನ ಅಳಿಸಿ ನಮ್ಮ ನೆನಪಲ್ಲಿ ಉಳಿತಾ ಇದೆ. ಇದೊಂದು ಕಟ್ಟಡ ಮಾತ್ರ ಅಲ್ಲ ಬದಲಾಗಿ ಸಿನಿಮಾ ಪ್ರೇಮಿಗಳಿಗೆ ಎಮೋಷನ್.ಇದು ಈಗ ಇತಿಹಾಸ ಪುಟ ಸೇರಲಿದೆ.

Written By
Kannada Picchar

Leave a Reply

Your email address will not be published. Required fields are marked *