ಟಾಕ್ಸಿಕ್ ಕೌಂಟ್ ಡೌನ್ ಕೊಟ್ಟ ರಾಕಿಭಾಯ್ ಡೇಟ್ ರೀ ಕನ್ಫರ್ಮ್
ರಾಕಿಂಗ್ ಸ್ಟಾರ್ ಯಶ್ ನಾಯಕ ನಟನಾಗಿ ಅಭಿನಯ ಮಾಡುತ್ತಿರುವ ಮುಂದಿನ ವರ್ಷದ ನಿರೀಕ್ಷಿತ ಸಿನಿಮಾ ಟಾಕ್ಸಿಕ್.ಮಲ್ಯಾಳಮ್ ಚಿತ್ರ ರಂಗದ ನಿರ್ದೇಶಕಿ ಗೀತು ಮೋಹನ್ ದಾಸ್ ಅವರ ಸಾರಥ್ಯ ದಲ್ಲಿ ಮೂಡಿ ಬರುತ್ತಿರುವ ಟಾಕ್ಸಿಕ್, ಕನ್ನಡ ಹಾಗೂ ಇಂಗ್ಲಿಷ್ ಎರಡು ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಣವಾಗುತ್ತಿದ್ದು, ಕನ್ನಡ, ಮಲಯಾಳಂ, ತಮಿಳ್, ತೆಲುಗು, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.ಚಿತ್ರ ಬಿಡುಗಡೆಯ ದಿನಾಂಕವನ್ನು ಮಾರ್ಚ್ 22 ರಂದೇ ರೀವಿಲ್ ಮಾಡಿದ್ದ ಚಿತ್ರತಂಡ ಟಾಕ್ಸಿಕ್ 2026 ರ ಮಾರ್ಚ್ 19 ರಂದು ತೆರೆಗೆ ಅಪ್ಪಳಿಸಲಿದೆ ಎಂದು ಹೇಳಿದ್ದಾರೆ.
ಕೆವಿಎನ್ ಪ್ರೊಡಕ್ಷನ್ ಅಡಿಯಲ್ಲಿ ತಯಾರಾಗುತ್ತಿರುವ ಸಿನಿಮಾ ಇದಾಗಿದ್ದು, ಇಂದು ಸಿನಿಮಾ ಬಿಡುಗಡೆಗೆ 100 ದಿನ ಬಾಕಿ ಇದೆ ಎಂಬ ಪೋಸ್ಟರ್ ಅನ್ನು ಚಿತ್ರ ತಂಡ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಇದನ್ನು ನೋಡಿದ ಅಭಿಮಾನಿಗಳು “ರಾಕಿ ಬಾಯ್ ಇಸ್ ಕಮಿಂಗ್ ಟು ರೂಲ್ ಎಗೈನ್ “,”ಮುಂದಿನ ವರ್ಷ ಇಂಡಸ್ಟ್ರಿಲಿ ನಮ್ಮ ಬಾಸ್ ದೇ ಹವಾ ” ಎಂದೆಲ್ಲಾ ಕಾಮೆಂಟ್ಸ್ ಮಾಡುವ ಮೂಲಕ ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.
ಟಾಕ್ಸಿಕ್ ಚಿತ್ರವು ಬರುವ ಮೊದಲೇ ಸಿನಿಮಾ ರಂಗದಲ್ಲಿ ದೊಡ್ಡ ಅಲೆಯನ್ನ ಮೂಡಿಸಿದೆ. ಇನ್ನು ಚಿತ್ರವು ಮುಂದಿನ ವರ್ಷ ದಾಖಲೆ ಮೇಲೆ ದಾಖಲೆಯನ್ನು ಮಾಡುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿದೆ. ಹಾಗಾಗಿ ವಿಶ್ವದಾದ್ಯಂತ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆ ಇದೆ.