News

ದಿ ಕಲರ್ ಆಫ್ ಟೊಮೇಟೊ: ಕರುನಾಡಿನ ಕಥೆ

ದಿ ಕಲರ್ ಆಫ್ ಟೊಮೇಟೊ: ಕರುನಾಡಿನ ಕಥೆ
  • PublishedSeptember 13, 2021

ಕರುನಾಡಿನ ಭಾಗವಾಗಿರುವ ಕೋಲಾರ ಜಿಲ್ಲೆಯ ದೊಡ್ಡ ಟೊಮ್ಯಾಟೋ ಮಾರುಕಟ್ಟೆಯ ಕುರಿತು ಕಥೆಯನ್ನು ಹೊಂದಿರುವ ಸಿನಿಮಾ ಒಂದು ಸೆಟ್ಟೇರುತ್ತಿದೆ. ದಿ ಕಲರ್ ಆಫ್ ಟೊಮೇಟೊ ಅಂತ ಹೀಗೊಂದು ಸಿನೆಮಾ ಸೆಟ್ಟೇರುತ್ತಿದ್ದು, ಇದು ಹಿರಿಯ ರಂಗಕರ್ಮಿ ಕೋಟಗಾನಹಳ್ಳಿ ರಾಮಯ್ಯ ಅವರು ಬರೆದಿರುವ ಕಥೆಯಾಗಿದೆ.

ಟೊಮೆಟೊ ಹಣ್ಣಿನಲ್ಲಿ ಹುಳಿ ಟೊಮೆಟೊ ಹಾಗೂ ಸಿಹಿ ಟೊಮ್ಯಾಟೋ ಎಂಬ ಎರಡು ವಿಧ ಇರುವಂತೆ ಸಿನಿಮಾದಲ್ಲಿಯೂ ಸಿಹಿ ಮತ್ತು ಹುಳಿ ಸನ್ನಿವೇಶಗಳನ್ನು ಒಳಗೊಂಡ ಕಥೆಯಿರುತ್ತದೆ. ರಂಗಭೂಮಿಯಲ್ಲಿ ಫೋಟೋಗ್ರಾಫರ್ ಆಗಿರುವ ತಾಯಿ ಲೋಕೇಶ್ ಅವರು ಈ ಸಿನಿಮಾದ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ ಹಾಗೂ ಬೆಂಕಿಪಟ್ಟಣ ಸಿನಿಮಾದಲ್ಲಿ ನಾಯಕನಾಗಿ ಗುರುತಿಸಿಕೊಂಡಿದ್ದ ಪ್ರತಾಪ್ ನಾರಾಯಣ ಸಿನಿಮಾದ ನಾಯಕ ನಟನಾಗಿ ಮತ್ತು ಸಿನಿಮಾ ಬಂಡಿ ಖ್ಯಾತಿಯ ಉಮಾ ಚಿತ್ರದ ನಾಯಕಿ. ಈ ಸಿನಿಮಾ ಕೋಲಾರದಲ್ಲಿರುವ ದೊಡ್ಡ ಟೊಮ್ಯಾಟೋ ಮಾರುಕಟ್ಟೆಯನ್ನು ಕುರಿತು  ಆಗಿರೋದರಿಂದ ಸುಮಾರು ಹತ್ತಿಪ್ಪತ್ತು ಜನರ ಸುತ್ತ ಅಲ್ಲಿಯೇ ನಡೆವ ಕಥೆಯಾಗಿ ಸಿನಿಮಾ ಮೂಡಿಬರಲಿದೆ.

ದಿ ಕಲರ್ ಆಫ್ ಟಿ ಟೊಮ್ಯಾಟೋ ಸಿನಿಮಾಗೆ ಸ್ವಾತಿ ಕುಮಾರ್ ಅವರು ನಿರ್ಮಾಪಕರಾಗಿದ್ದಾರೆ. ಈ ಸಿನಿಮಾ ಮೂರು ಕಥೆಗಳನ್ನು ಒಳಗೊಂಡು ಸಿದ್ದವಾಗಿದ್ದು, ಕೊಲಾಜ್ ಆಗಿದೆ ಮತ್ತು ಸಿನಿಮಾ ಅಂದಮೇಲೆ ಅಲ್ಲಿ ಒಂದು ಪ್ರೇಮಕಥೆ ಭಾವನಾತ್ಮಕ ಸನ್ನಿವೇಶ ಸೆಂಟಿಮೆಂಟ್ ಇರಲೇಬೇಕಲ್ಲ ಹಾಗಾಗಿ ಇವೆಲ್ಲವುಗಳ ಮಿಶ್ರಣದಲ್ಲಿ ತಯಾರಾಗಲಿದೆ ಆದರೆ ಹಿಂಸೆಗೆ ಹೆಚ್ಚು ಪ್ರಾಧ್ಯಾನ್ಯತೆ ಇಲ್ಲ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಅದ್ದೂರಿಯಾಗಿ ಕನ್ನಡ ಸಿನಿಮಾಗಳಲ್ಲಿ ಈ ನೆಲದ ಕಥೆಗಳನ್ನು, ಹಲವಾರು ಘಟನೆಗಳನ್ನು, ಸನ್ನಿವೇಶಗಳನ್ನು ಒಳಗೊಂಡು ವೈವಿಧ್ಯಮಯ ಸಿನಿಮಾಗಳು ಈಗಾಗಲೇ ಬಂದಿವೆ ಅವುಗಳ ಸಾಲಿಗೆ ಈ ನೆಲದ ಕಥೆಯಾಗಿ ದಿ ಕಲರ್ ಆಫ್ ಟೊಮೇಟೊ ಸೇರಲಿದೆ.

****

Written By
Kannadapichhar

Leave a Reply

Your email address will not be published. Required fields are marked *