ಶಿವಣ್ಣನ ಭಜರಂಗಿ 2 ಚಿತ್ರಕ್ಕೆ ತೆಲುಗು ಸ್ಟಾರ್ ನಟನ ಶುಭ ಹಾರೈಕೆ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ಭಜರಂಗಿ 2’ ಸಿನಿಮಾ ನಾಳೆ (ಅ 29)ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಈ ನಡುವೆ ಈ ಸಿನಿಮಾಗೆ ತೆಲುಗು ಸ್ಟಾರ್ ನಟ ಅಲ್ಲು ಅರ್ಜುನ್ ಶುಭ ಕೋರಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಲ್ಲು ಅರ್ಜುನ್, ನಾಳೆಯಿಂದ ಕರ್ನಾಟಕದಲ್ಲಿ ಭಜರಂಗಿ 2 ಸಿನಿಮಾ ಬಿಡುಗಡೆಯಾಗುತ್ತಿದೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದಿದ್ದಾರೆ.
ಕನ್ನಡ ಸಿನಿಮಾಗೆ ಅಲ್ಲು ಅರ್ಜುನ್ ಶುಭ ಹಾರೈಸಿರುವುದು ಶಿವಣ್ಣನ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಸದ್ಯಕ್ಕೆ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ‘ಪುಷ್ಪ’ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ರಿಲೀಸ್ ಆಗಿದ್ದು ಸಕತ್ ಸೌಂಡ್ ಮಾಡುತ್ತಿವೆ ಇಂದು ಪುಷ್ಪ ಚಿತ್ರದ ಮೂರನೇ ಹಾಡು ‘ಸಾಮಿ ಸಾಮಿ’ ರಿಲೀಸ್ ಆಗುತ್ತಿದೆ, ದಕ್ಷಿಣ ಭಾರತದ ದೊಡ್ಡ ದೊಡ್ಡ ಸ್ಟಾರ್ ನಟರು ಚಿತ್ರದಲ್ಲಿ ಅಭಿನಯಿಸಿದ್ದು ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.
****