News

ತಮಿಳುನಾಡು ಹೊಸ CM ಸ್ಟಾಲಿನ್, ಶಿವಣ್ಣನ ದೋಸ್ತ್

ತಮಿಳುನಾಡು ಹೊಸ CM ಸ್ಟಾಲಿನ್, ಶಿವಣ್ಣನ ದೋಸ್ತ್
  • PublishedMay 2, 2021

ಕರುನಾಡ ಚಕ್ರವರ್ತಿ ಶಿವಣ್ಣ ಹುಟ್ಟಿದ್ದು, ಬಾಲ್ಯವನ್ನು ಕಳೆದದ್ದೂ ಎಲ್ಲವೂ ಮದ್ರಾಸಿನಲ್ಲೇ… ಶಿವಣ್ಣನಿಗೆ ಚೆನ್ನೈ ಅಂದ್ರೇ ಅತೀವ ಪ್ರೀತಿ.. ಯಾಕೆಂದ್ರೆ ಬಾಲ್ಯದ ದಿನಗಳನ್ನು ಹೆಚ್ಚಾಗಿ ಕಳೆದಿದ್ದೇ ಚೆನ್ನೈನಲ್ಲಿ.. ಬಾಲ್ಯದ ನೆನಪುಗಳು, ಬಾಲ್ಯದ ಸ್ನೇಹಿತರನ್ನು ಶಿವಣ್ಣ ಆಗಿಂದಾಗೆ ನೆನಪಿಸಿಕೊಳ್ತಾರೆ.. ಹ್ಯಾಟ್ರಿಕ್ ಹೀರೋಗೆ ಸ್ನೇಹಿತರ ಬಳಗ ದೊಡ್ಡದು… ಶಿವಣ್ಣ ಅಂದ್ರೆ ಸ್ನೇಹಿತರಿಗೂ ಅಷ್ಟೇ ಅಭಿಮಾನ.. ಶಿವಣ್ಣನ ಈ ಸ್ನೇಹಿತರ ಪಟ್ಟಿಯಲ್ಲಿ ಖ್ಯಾತನಾಮರ‌ ದೊಡ್ಡ ಪಟ್ಟಿಯೇ ಇದೆ.. ಅದ್ರಲ್ಲೂ ಬಾಲ್ಯದ ಸ್ನೇಹಿತರು ಇವತ್ತಿಗೆ ಚೆನ್ನೈನ ಜನ- ಮನ ಗೆದ್ದು ತಮಿಳುನಾಡಿನ ಐಕಾನ್ಗಳಾಗಿ ಬದುಕ್ತಿದ್ದಾರೆ.. ಇದೀಗ ಶಿವಣ್ಣನ ಆಪ್ತ ಸ್ನೇಹಿತರೊಬ್ಬರು ತಮಿಳುನಾಡಿನ ಅಧಿಕಾರದ ಗದ್ದುಗೆಯನ್ನೂ ಏರುತ್ತಿದ್ದಾರೆ…

ಶಿವಣ್ಣನ ಕುಚುಕು ಗೆಳೆಯ ಸ್ಟಾಲಿನ್..!
ಎಂ.ಕೆ.ಸ್ಟಾಲಿನ್ ಅಂದ್ರೆ ನಿಮಗೆ ಗೊತ್ತೇ ಇದೆ.. ತಮಿಳುನಾಡಿನ ಧೀಮಂತ ನಾಯಕ ಕರುಣಾನಿಧಿ ಪುತ್ರ.. ಇದೀಗ ತಮಿಳುನಾಡು ಪಾಲಿಟಿಕ್ಸ್ನ ಧ್ರುವತಾರೆ.. ನಮ್ಮ ಶಿವಣ್ಣಗೂ – ಸ್ಟಾಲಿನ್ಗೂ ಹೇಗಪ್ಪಾ ಫ್ರೆಂಡ್ ಶಿಪ್ ಅಂದುಕೊಂಡ್ರ.. ಇವರಿಬ್ಬರೂ ಬಾಲ್ಯದ ಗೆಳೆಯರು.. ಇಬ್ಬರ ನಡುವೆ ಏಳೆಂಟು ವರ್ಷಗಳ ಅಂತರವಿದೆ.. ಆದ್ರೂ ಕುಚುಕು ಗೆಳೆಯರಿವರು.. ಒಂದೇ ಸ್ಕೂಲಲ್ಲಿ ಓದೋದ್ರ ಜೊತೆಗೆ.. ಆಟ- ಪಾಠಗಳಲ್ಲೂ ಜೊತೆಯಾಗಿ ಇರುತ್ತಿದ್ರು.. ಚಿಕ್ಕ ವಯಸ್ಸಿನಲ್ಲಿ ಶಿವಣ್ಣಗೆ ಡ್ಯಾನ್ಸ್, ನಟನೆ ಅಂದ್ರೆ ಪಂಚಪ್ರಾಣ‌. ಇತ್ತ ಸ್ಟಾಲಿನ್ಗೆ ಬಾಲ್ಯದಲ್ಲೇ ರಾಜಕಾರಣದತ್ತ ಕಣ್ಣು.. ಸ್ಟಾಲಿನ್ ತಮ್ಮ 14 ನೇ ವಯಸ್ಸಿನಲ್ಲೇ ಹೋರಾಟ, ಪ್ರತಿಭಟನೆ, ರಾಜಕಾರಣ ಅಂತಾ ಶುರು ಹಂಚ್ಕೊಂಡಿದ್ರು..‌ ಆದ್ರೂ ಇವರಿಬ್ಬರ ಸ್ನೇಹಕ್ಕೆ ಯಾವುದೇ ಅಡೆ ತಡೆ ಇರುತ್ತಿರಲಿಲ್ಲ.. ಆಗಿಂದಾಗೇ ಶಿವಣ್ಣ – ಸ್ಟಾಲಿನ್ ಭೇಟಿಯಾಗ್ತಿದ್ರು.. ಹರಟೆ – ತಮಾಷೆ ಮಾಡ್ತಿದ್ರು.. ರಾಜ್ ಫ್ಯಾಮಿಲಿಗೂ – ಕರುಣಾನಿಧಿ ಫ್ಯಾಮಿಲಿಗೂ ಒಂದೊಳ್ಳೆ ಬಾಂಧವ್ಯವಿತ್ತು.. ಆದ್ರಿಂದ ಅವ್ರ ಮನೆಗೆ ಇವ್ರು.. ಇವ್ರ ಮನೆಗೆ ಅವರು ಆಗಿಂದಾಗ್ಗೆ ಭೇಟಿಕೊಡ್ತಿದ್ರು…

ಶಿವಣ್ಣನ ಮಗಳ ಮದುವೇಲಿ ಸ್ಟಾಲಿನ್..
ರಾಜ್ ಫ್ಯಾಮಿಲಿ ಚೆನ್ನೈನಿಂದ ಬೆಂಗಳೂರಿಗೆ ಶಿಫ್ಟ್ ಆದ ಬಳಿಕವೂ.. ಕರುಣಾನಿಧಿ ಫ್ಯಾಮಿಲಿ ಜೊತೆಗೆ ಒಡನಾಟ ಚೆನ್ನಾಗಿತ್ತು.. ಕರುಣಾನಿಧಿ ಫ್ಯಾಮಿಲಿಯೂ ಅದೆಷ್ಟೋ ಬಾರಿ ಸದಾಶಿವನಗರದ ಅಣ್ಣಾವ್ರ ಮನೆಗೆ ಭೇಟಿ ಕೊಟ್ಟಿದ್ದಿದೆ. ಉಳಿದಂತೆ ಶಿವಣ್ಣ – ಸ್ಟಾಲಿನ್ ಎಷ್ಟೇ ಬ್ಯುಸಿಯಾಗಿದ್ರು.. ಫೋನ್ನಲ್ಲಿಯಾದ್ರೂ ಮಾತನಾಡ್ತಾ ಇರ್ತಾರೆ.. ಶಿವಣ್ಣನ ದೊಡ್ಡ ಮಗಳ ಮದುವೆ ಸಮಾರಂಭದಲ್ಲೂ ಸ್ಟಾಲಿನ್ ಭಾಗಿಯಾಗಿದ್ರು..‌ ತಮ್ಮ ಮನೆಯ ಕಾರ್ಯಕ್ರಮವೇನೋ ಅನ್ನುವಷ್ಟು ಖುಷಿಯಿಂದ ರಾಜ್ ಫ್ಯಾಮಿಲಿಯ ಸಂಭ್ರಮದಲ್ಲಿ ಭಾಗಿಯಾಗಿದ್ರು.. ಕರುಣಾನಿಧಿ ಮರಣದ ನಂತರ ಡಿಎಂಕೆ ಪಕ್ಷದ ಕಥೆ ಮುಗೀತು ಅಂತಾ ಎಲ್ಲರೂ ಅಂದುಕೊಂಡಿದ್ರು.. ಆದ್ರೆ ಸ್ಟಾಲಿನ್ ಛಲಬಿಡದ ವಿಕ್ರಮನಂತೆ ಪಕ್ಷಕ್ಕಾಗಿ ಹೋರಾಟ ನಡೆಸಿದ್ರು.. ಇದೀಗ ಪಂಚರಾಜ್ಯಗಳ ಚುನಾವಣೆಯಲ್ಲಿ ತಮಿಳುನಾಡಿನ ಚುನಾವಣೆ ಎಲ್ಲರ ಕಣ್ಣು ತೆರೆಸಿದೆ‌. ಅಂದಿಗೂ ಇಂದಿಗೂ ಎಂದೆಂದಿಗೂ ಡಿಎಂಕೆ ತಮಿಳುನಾಡಿನ ಜನರಪರ ಅನ್ನೋದನ್ನು ಸ್ಟಾಲಿನ್ ತೋರಿಸಿಕೊಟ್ಟಿದ್ದಾರೆ.. ಪ್ರಾದೇಶಿಕ ಪಕ್ಷಗಳ ಜೊತೆಗೆ ರಾಷ್ಟ್ರೀಯ ಪಕ್ಷಗಳು ಒಡ್ಡಿದ ಸವಾಲಿಗೆ ಸ್ಟಾಲಿನ ದಿಗ್ವಿಜಯ ಉತ್ತರ ಕೊಟ್ಟಿದೆ.

Written By
Kannadapichhar

Leave a Reply

Your email address will not be published. Required fields are marked *