ಮೊಮ್ಮಗನ ಮೂಲಕ ‘ಚಿರು’ ಮರುಜನ್ಮವಾಗಿದೆ- ಸುಂದರ್ ರಾಜ್

ಪ್ರೀತಿಯ ಮೊಮ್ಮಗನಿಗೆ ನಾಮಕರಣ ಮಾಡೋ ಮೂಲಕ ಹಿರಿಯ ನಟ ಸುಂದರ್ ರಾಜ್ , ಅಳಿಯರನ್ನ ನೆನೆದು ಬಹಳ ಭಾವುಕರಾಗಿ ಮಾತನಾಡಿದ್ದಾರೆ.

2 ವರ್ಷದಿಂದ ಎಲ್ರು ಕಷ್ಟದಲ್ಲಿದ್ದೇವೆ. ಸರ್ಜಾ ಕುಟುಂಬಕ್ಕೂ ನಮಗೂ ಕಂದಮ್ಮ ಕೊಂಡಿಯಾಗಿದೆ.ಚಿರು ಇಲ್ಲ, ರಾಯನ್ ಇದ್ದಾನೆ.ಚಿರು ಯಾವಾಗಲೂ ನನಗೆ ಹೇಳ್ತಿದ್ದ. ನಾನು ಮತ್ತೆ ಹುಟ್ಟಿ ಬರ್ತೀನಿ ಅಂತ. ಚಿರು ಹೇಳಿದ ಮಾತು ನಿಜವಾಗಿದೆ.ಫಿನಿಕ್ಸ್ ಹಕ್ಕಿಯಂತೆ ರಾಯನ್ ಬಂದಿದ್ದಾನೆ. ಎಲ್ಲಾರಿಗೂ ಧನ್ಯವಾದ ಎಂದು ಹೇಳ್ತಾ, ಈ ಕಷ್ಟಕಾಲದಲ್ಲಿ ಜೊತೆಗಿದ್ದ ತಮ್ಮ ಕುಟುಂಬದ ಅಷ್ಟು ಜನರನ್ನ ನೆನೆದರು ಸುಂದರ್ ರಾಜ್.

****