new updates News ಪಿಚ್ಚರ್ stories ಪಿಚ್ಚರ್ UPDATE

ಧ್ರುವಾಗೆ ದುನಿಯಾ ಸೂರಿ ಆ್ಯಕ್ಷನ್ ಕಟ್..!?ಯುವ ಜೊತೆಗಿನ ಚಿತ್ರಕ್ಕೆ ಬ್ರೇಕ್..!?

ಧ್ರುವಾಗೆ ದುನಿಯಾ ಸೂರಿ ಆ್ಯಕ್ಷನ್ ಕಟ್..!?ಯುವ ಜೊತೆಗಿನ ಚಿತ್ರಕ್ಕೆ ಬ್ರೇಕ್..!?
  • PublishedDecember 7, 2025

By Pallavi N Raj
ಗಾಂಧಿನಗರದಲ್ಲಿ ಕ್ಷಣಕ್ಕೊಂದು ಗಾಸಿಪ್ ಸದ್ದು ಮಾಡುತ್ತೆ.. ಈ ಹಿಂದೆ ಸುಕ್ಕ ಸೂರಿ ಯುವ ರಾಜ್‌ಕುಮಾರ್ ಕಾಂಬಿನೇಷನ್ ಚಿತ್ರಕ್ಕೆ ಅಧಿಕೃತವಾಗಿ ಚಾಲನೆ ಸಿಕ್ಕಿತ್ತು.. ದುನಿಯಾ ಸೂರಿ ರಾಜ್‌ ಕುಟುಂಬದ ಕುಡಿ ಯುವಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎನ್ನುವ ಮಾತುಗಳು ಗುಲ್ಲೆದಿತ್ತು.. ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ ಸೂರಿ ಯುವ ಕಾಂಬಿನೇಷನ್‌ನ ಚಿತ್ರದ ಮುಹೂರ್ತ ಕೂಡ ನೆರವೇರಿತ್ತು..

ಎಕ್ಕ ಬಿಡುಗಡೆಗೂ ಮುನ್ನವೇ ಚರ್ಚೆ ಆಗಿದ್ದರಿಂದ ನಿರೀಕ್ಷೆ ದುಪ್ಪಟ್ಟಿತ್ತು.. ಬಟ್ ಯುವ ಜೊತೆ ಸುಕ್ಕ ಸೂರಿ ಸಧ್ಯಕ್ಕೆ ಸಿನಿಮಾ ಕೈಬಿಟ್ಟಂತೆ ಕಾಣ್ತಾಯಿದೆ..
ಹೌದು.. ಸ್ಯಾಂಡಲ್ವುಡ್ ನಲ್ಲಿ ಹೀಗೊಂದು ಬಿಸಿ ಬಿಸಿ ಚರ್ಚೆ ಜೋರಾಗಿದೆ.. ಸೂರಿ ಯಾಕೋ ಯುವ ಜೊತೆಗಿನ ಸಿನಿಮಾದ ಬಗ್ಗೆ ಮಾತಾಡುತ್ತಲೇ ಇಲ್ಲ. ಬಲ್ಲ ಮೂಲಗಳ ಮಾಹಿತಿಯ ಪ್ರಕಾರ ಧ್ರುವ, ಚಂದನ್, ಜೊತೆಗೆ ಹೊಸ ಸಿನಿಮಾ ಮಾಡಲು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ..

ಸುಕ್ಕ ಸೂರಿ ಸಿನಿಮಾಗಳೆಂದರೆ ವಿಶೇಷ ದುನಿಯಾ, ಟಗರು, ಅಣ್ಣಾಬಾಂಡ್, ಜಾಕಿ, ಕಡ್ಡಿಪುಡಿ, ಜಂಗ್ಲಿ, ಕೆಂಡಸಂಪಿಗೆ ರಿಸೆಂಟಾಗಿ ಬಂದಿರೋ ಬ್ಯಾಡ್ ಮ್ಯಾನರ್ಸ್ ಸಿನಿಮಾದ ವರೆಗೂ ಅಧ್ಬುತವಾಗಿ ಉತ್ತಮ ಕಥಾ ಹಂದರದೊಂದಿಗೆ ತಮ್ಮದೆ ಛಾಪನ್ನು ಮೂಡಿಸಿದ್ದಾರೆ.. ಹೀಗಿರುವಾಗ ಧ್ರವ ಜೊತೆಗೆ ಸೂರಿ ಸಿನಿಮಾ ಮಾಡಿದ್ರೆ ಹೇಗಿರುತ್ತೆ ಅನ್ಮೊ ಕುತೂಹಲ ಸಿನಿಮಾ ಪ್ರೇಕ್ಷಕರಲ್ಲಿ ದುಪ್ಪಟ್ಟಿದೆ..

ಅಂದಹಾಗೆ.. ಧ್ರುವ ಸರ್ಜಾ ಸಧ್ಯಕ್ಕೆ KD ಸಿನಿಮಾದಲ್ಲಿ ಬ್ಯೂಸಿಯಾಗಿದ್ದಾರೆ ಎಲ್ಲವೂ ಅಂದುಕೊಂಡಂತೆ ಆಗಿದ್ರೆ ಇಷ್ಟೋತ್ತಿಗಾಗಲೇ KD ಸಿನಿಮಾ ಸೆಟ್ಟೇರಬೇಕಿತ್ತು ಬಟ್ ಕಾರಾಣಾಂತರದಿಂದ ಡಿಲೇ ಆಗಿದೆ.. ಇವರಿಬ್ಬರ ಕಾಂಬಿನೇಷನ್ ನೋಡಲು ಅಭಿಮಾನಿಗಳು ಕಾದು ಕುಳಿತ್ತಿದ್ದಾರೆ..

ಇನ್ನು.. ಧ್ರುವ ಸರ್ಜಾರನ್ನ ಸೂರಿ ಮಾಸ್ ಆಗಿ ತೋರಿಸ್ತಾರ ಕ್ಲಾಸ್ ಲುಕ್ ನಲ್ಲಿಯೇ ತೋರಿಸ್ತಾರ ತಿಳಿದಿಲ್ಲ.. ಮತ್ತೊಂದು ವಿಶೇಷವೆಂದರೆ ಧ್ರುವ ಸೂರಿಗೆ ಸಾಥ್ ನೀಡಿರುವುದು ಚಂದನ್ ಶೆಟ್ಟಿ ಈ ಸಿನಿಮಾದಲ್ಲಿ ಚಂದನ್ ಹಿರೋನಾ ಅಥವಾ ಮ್ಯೂಸಿಕ್ ಮಾಡಿದ್ದಾರಾ ತಿಳಿದು ಬಂದಿಲ್ಲ. ಹಾಗೆನಾದರು ಧ್ರುವ ಜೊತೆಗೆ ಶೆಟ್ರು ಹೆಜ್ಜೆ ಹಾಕಿದ್ರೆ ಸಿನಿಮಾ ನೆಕ್ಸ್ಟ್ ಲೆವೆಲ್ ಹಿಟ್ ಪಕ್ಕಾ

ಒಟ್ನಲ್ಲಿ.. ಸದ್ಯಕ್ಕಿರೋ ಮಾಹಿತಿಯ ಪ್ರಕಾರ ಸುಕ್ಕಾ ಸೂರಿ ಧ್ರುವ ಸರ್ಜಾಗೆ ಪಕ್ಕಾ ಆಕ್ಷನ್ ಕಟ್ ಹೇಳಲು ರೆಡಿಯಾಗಿದ್ದು, ಇದ್ರಲ್ಲಿ ವಿಭಿನ್ನವಾದ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಇಬ್ಬರ ಕಾಂಬೋಗೆ ಚಂದನ್ ಶೆಟ್ಟಿ ಸಾಥ್ ಕೊಟ್ಟಿದ್ದು ಸಿನಿಮಾ ಯಾವುದು..? ಯಾವಾಗ ಅನೌನ್ಸ್ ಮಾಡ್ತಾರೆ ಕಾದು ನೋಡಬೇಕಿದೆ..

Written By
Kannada Picchar

Leave a Reply

Your email address will not be published. Required fields are marked *