new updates News ಪಿಚ್ಚರ್ stories ಪಿಚ್ಚರ್ UPDATE

ದರ್ಶನ್‌, ಸುದೀಪ್‌ ಫ್ಯಾನ್ಸ್‌ ಸಮರ! ಡೆವಿಲ್‌ ಸಿನಿಮಾದ 10,500 ಪೈರಸಿ ಲಿಂಕ್ಸ್ ಡಿಲೀಟ್!

ದರ್ಶನ್‌, ಸುದೀಪ್‌ ಫ್ಯಾನ್ಸ್‌ ಸಮರ! ಡೆವಿಲ್‌ ಸಿನಿಮಾದ 10,500 ಪೈರಸಿ ಲಿಂಕ್ಸ್ ಡಿಲೀಟ್!
  • PublishedDecember 23, 2025


ದರ್ಶನ್ ಅಭಿನಯದ ಡೆವಿಲ್‌ ಸಿನಿಮಾ ಡಿಸೆಂಬರ್ 11ರಂದು ರಾಜ್ಯಾದ್ಯಂತ ತೆರೆಕಂಡಿದ್ದು, ಇಂದಿಗೆ 12ನೇ ದಿನಕ್ಕೆ ಕಾಲಿಟ್ಟಿದೆ. ಈ ಸಿನಿಮಾವವನ್ನು ಗೆದ್ದೇ ಗೆಲ್ಲಿಸುತ್ತೇವೆ ಅಂತ ಅಭಿಮಾನಿಗಳು ನಿರ್ಧಾರ ಮಾಡಿದ್ರು, ಇತ್ತ ಪೈರಸಿ ಕಾರಣದಿಂದ ಸಿನಿಮಾಗೆ ಹೊಡೆತ ಬಿದ್ದಂತಾಗಿತ್ತು..
ಹೌದು.. ಯಾರೋ ಕಿಡಿಗೇಡಿಗಳು ಮಾಡಿದ ಪೈರಸಿಯಿಂದ ಸಿನಿಮಾಗೆ ಸ್ವಲ್ಪ ಪ್ರಮಾಣದಲ್ಲಿ ಹೊಡೆತ ಬಿದ್ದಂತಾಗಿದೆ. ಇದೀಗ ಇಡೀ ಚಿತ್ರರಂಗಕ್ಕೆ ಇದೇ ಪೈರಸಿ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಸದ್ಯ ನಟ ದರ್ಶನ್ ಅಭಿಮಾನಿಗಳು ಮತ್ತು ಕಿಚ್ಚ ಸುದೀಪ್‌ ನಡುವೆ ಮಾತಿನ ಸಮರ ಏರ್ಪಟ್ಟಿದೆ. ಈ ನಡುವೆಯೇ ಡೆವಿಲ್‌ ಚಿತ್ರತಂಡ ಈ ಪೈರಸಿ ಕುರಿತು ಪೋಸ್ಟ್‌ವೊಂದನ್ನ ಹಂಚಿಕೊಂಡಿದೆ. ಪೈರಸಿ ಇಂದು ವೈರಸ್‌ನಂತೆ ಹಬ್ಬುತ್ತಿದೆ. ಈವರೆಗೂ 10,500ಕ್ಕೂ ಹೆಚ್ಚು ಪೈರಸಿ ಲಿಂಕ್‌ಗಳನ್ನು ತೆಗೆದುಹಾಕುವ ಕೆಲಸ ನಡೆದಿದೆ. ದಯವಿಟ್ಟು ಯಾರೂ ಪೈರಸಿ ಮಾಡಬೇಡಿ, ಸಿನಿಮಾವನ್ನ ಥಿಯೇಟರ್‌ಗೆ ಹೋಗಿ ನೋಡಿ ಎಂದು ಡೆವಿಲ್‌ ಚಿತ್ರತಂಡ ಮನವಿ ಮಾಡಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಇಷ್ಟು ದೊಡ್ಡಮಟ್ಟಿದೆ ಪೈರಸಿ ಆಗಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದೆ.

Written By
Kannada Picchar

Leave a Reply

Your email address will not be published. Required fields are marked *