ಪತ್ನಿ-ಮಗಳ ಪ್ರೊಡಕ್ಷನ್ ನಲ್ಲಿ ಕಿಚ್ಚನ ಹೊಸ ಪಿಚ್ಚರ್?
ಹೊಸ ಸಿನಿಮಾ ನಿರ್ಮಾಣ ಮಾಡಲು ಸಿದ್ಧರಾದ ಕಿಚ್ಚ..!
ಅನೂಪ್ ಭಂಡಾರಿ ಜೊತೆ ಮತ್ತೊಂದು ಸಿನಿಮಾ ಸಿದ್ದತೆ..!
ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಂಡಸ್ಟ್ರಿಯಲ್ಲಿ ಬ್ಯೂಜಿಯಾಗಿರುವ ನಟ… ಕೇವಲ ಕನ್ನಡ ಸಿನಿಮಾಗಳಲ್ಲಿ ಮಾತ್ರವಲ್ಲದೆ ಅಕ್ಕಪಕ್ಕದ ಇಂಡಸ್ಟ್ರಿಯ ಸಿನಿಮಾದಲ್ಲಿಯೂ ಕಿಚ್ಚ ಆಗಾಗ ಅಭಿನಯ ಮಾಡುತ್ತಿದ್ದಾರೆ… ಸದ್ಯ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ…ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ ಸಿನಿಮಾ ಸೆನ್ಸಾರ್ ಬಾಗಿಲಲ್ಲಿ ನಿಂತಿದೆ …

ಇನ್ನೇನಿದ್ರೂ ಸಿನಿಮಾದ ಡೇಟ್ ಅನೌನ್ಸ್ ಮಾಡಿ ನಂತರ ಪ್ರಮೋಷನ್ ಮಾಡಿ ಬಿಡುಗಡೆ ಮಾಡುವುದಷ್ಟೇ ಬಾಕಿಯಿದೆ… ಈ ನಿಟ್ಟಿನಲ್ಲಿ ಈಗಾಗ್ಲೇ ಸಿನಿಮಾವನ್ನ ನೋಡಿರುವಂಥ ಕಿಚ್ಚ ಸುದೀಪ್ ಸಿನಿಮಾ ತುಂಬ ಸುಂದರವಾಗಿ ಮೂಡಿ ಬಂದಿದೆ… ಎಂದು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ …

ಅದರೊಟ್ಟಿಗೆ ತಮ್ಮ ಮುಂದಿನ ಸಿನಿಮಾ ಅನೌನ್ಸ್ ಮಾಡುವ ಸೂಚನೆ ಕೂಡ ಕೊಟ್ಟಿದ್ದಾರೆ… ಹೌದು ವಿಕ್ರಾಂತ್ ರೋಣ ಸಿನಿಮಾವನ್ನ ನಿರ್ದೇಶನ ಮಾಡಿರುವ ಅನೂಪ್ ಭಂಡಾರಿ ಅವರ ಜೊತೆಗೇ ಕಿಚ್ಚ ಮತ್ತೆ ಕೆಲಸ ಮಾಡಲಿದ್ದಾರೆ.. ಈ ವಿಚಾರವನ್ನ ಸ್ವತಃ ಸುದೀಪ್ ಅವರೇ ತಿಳಿಸಿದ್ದಾರೆ …ಇನ್ನೂ ಅದರೊಟ್ಟಿಗೆ ಈ ಸಿನಿಮಾವನ್ನ ಅವರ ಪತ್ನಿ ಪ್ರಿಯಾ ಸುದೀಪ್ ಹಾಗೂ ಮಗಳು ಸಾನ್ವಿ ಹೆಸರಿನಲ್ಲಿ ನಿರ್ಮಾಣ ಮಾಡುವ ಹಿಂಟನ್ನು ಕೊಟ್ಟಿದ್ದಾರೆ ..ಆದರೆ ಸಿನಿಮಾ ಯಾವಾಗ ಸೆಟ್ಟೇರಲಿದೆ ? ಯಾವ ರೀತಿಯ ಸಿನಿಮಾ ಅನ್ನೋದು ಮಾತ್ರ ಬಿಟ್ಟುಕೊಟ್ಟಿಲ್ಲ..ಒಟ್ಟಾರೆ ವಿಕ್ರಾಂತ್ ರೋಣ ನಂತ್ರ ಮತ್ತೆ ಕಿಚ್ಚ ಹಾಗೂ ಅನೂಪ್ ಮತ್ತೊಂದು ಅದ್ಬುತ ಚಿತ್ರದ ಮೂಲಕ ಪ್ರೇಕ್ಷರ ಮುಂದೆ ಬರೋದು ಕನ್ಫರ್ಮ್…