new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ನನ್ನ ಮಗಳು ನನಗಿಂತ ಹತ್ರಷ್ಟು ಬೆಳಿತಾಳೆ:ಕಿಚ್ಚ

ನನ್ನ ಮಗಳು ನನಗಿಂತ ಹತ್ರಷ್ಟು ಬೆಳಿತಾಳೆ:ಕಿಚ್ಚ
  • PublishedDecember 27, 2025

ಡಿಸೆಂಬರ್ 25ರಂದು ಸುದೀಪ್ ಅವರ ಮಗಳು ಸಾನ್ವಿ ಸುದೀಪ್ ತಮ್ಮ ತಂದೆಯ ಚಿತ್ರವಾದ ಮಾರ್ಕ್ ಅನ್ನು ಚಿತ್ರಮಂದಿರದಲ್ಲಿ ವೀಕ್ಷಿಸಲು ಹೋಗಿದ್ದರು. ಆ ಸಮಯದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಅನೇಕ ಕೆಟ್ಟ ಕಾಮೆಂಟ್ಗಳು ಬಂದಿದ್ದವು. ಇದಕ್ಕೆ ಇಂದು ನಡೆದ ಮಾರ್ಕ್ ಪ್ರೆಸ್ ಮೀಟ್ ಅಲ್ಲಿ ಸುದೀಪ್ ಅವರು ಖಡಕ್ಕಾಗಿ ಉತ್ತರವನ್ನು ನೀಡಿದ್ದಾರೆ.

ಸಾನ್ವಿ ಸುದೀಪ ಅವರು ಸ್ಟಾರ್ ಕಿಡ್ ಆಗಿದ್ದರು, ತಮ್ಮ ಪ್ರತಿಭೆ ಹಾಗೂ ಸರಳತೆಗೆ ಗುರುತಿಸಿಕೊಂಡವರು. ಇದನ್ನು ಅವರು ಮಾರ್ಕ್ ಚಿತ್ರದಲ್ಲಿ ‘ಮಸ್ತ್ ಮಲೈಕಾ’ ಹಾಡನ್ನು ಹಾಡುವ ಮೂಲಕ ತೋರಿಸಿಕೊಟ್ಟಿದ್ದಾರೆ. ಅವರ ಅದ್ಭುತ ಕಂಠವನ್ನು ಸಿನಿಪ್ರಿಯರು ಹೊಗಳಿದ್ದಾರೆ.

ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸುದೀಪ್ ” ನನ್ನ ಮಗಳು ಅವಳು. ನಾನೇ ಫೇಸ್ ಮಾಡಿದೀನಿ ಇನ್ನು ಅವಳು ಮಾಡಲ್ವಾ?ನನ್ನ ಮಗಳು ನನಗಿಂತ ಹತ್ರಷ್ಟು ಬೆಳಿತಾಳೆ” ಎಂದು ನುಡಿದಿದ್ದಾರೆ.

ಕೊನೆಯದಾಗಿ ಮಗಳ ಪ್ರತಿಭೆಯನ್ನು ಹೊಗಳಿದ ಸುದೀಪ್ “ನನ್ನ ಮಗಳನ್ನು ಸ್ವೀಕರಿಸಿದಂತಹ, ಆ ಹಾಡನ್ನು ಮೆಚ್ಚಿದಂತಹ ಚಿತ್ರರಂಗದಲ್ಲಿರೋ ಎಷ್ಟೋ ಮಿತ್ರರಿದ್ದಾರೆ,ನನ್ನ ಅಭಿಮಾನಿಗಳಿದ್ದಾರೆ. ಇಷ್ಟಿರಬೇಕಾದ್ರೆ ಇನ್ನೇನು?” ಎಂದು ಮಗಳ ಬಗ್ಗೆ ಹೆಮ್ಮೆ ಪಟ್ಟಿದ್ದಾಳೆ.

.

Written By
Kannada Picchar

Leave a Reply

Your email address will not be published. Required fields are marked *