ಬಿಗ್ ಬಾಸ್ ರೇಸ್ ನಿಂದ ಔಟ್ ಆದೋರು ಇವ್ರೇ!
ಬಿಗ್ ಬಾಸ್ ಸೀಸನ್ 12, ದಿನೇ ದಿನೇ ಟ್ವಿಸ್ಟ್ ಮೇಲೆ ಟ್ವಿಸ್ಟ್ ಅನ್ನು ಪಡೆದು ಕೊಳ್ಳುತ್ತಾ ಇದೆ.ಪ್ರತಿ ವಾರದ ಕೊನೆಯಲ್ಲಿ ಯಾರು ಮನೆಯಿಂದ ಗೇಟ್ ಪಾಸ್ ಆಗ್ತಾರೆ ಅನ್ನೋ ಕುತೂಹಲವು ಜನರ ಮನಸಲ್ಲಿ ಭಾನುವಾರ ಎಪಿಸೋಡ್ ಮುಗಿಯುವ ವರೆಗೂ ಕಾಡ್ತಾ ಇರುತ್ತೆ. ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ಕೂಡ ಅಷ್ಟೇ ಕುತೂಹಲವನ್ನು ಸೃಷ್ಟಿಸಿದ್ದು, ಮನೆಯ ಕ್ಯೂಟ್ ಬೆಡಗಿ ಸ್ಪಂದನ ಹೊರಗೆ ಬರುವ ಸಾಧ್ಯತೆ ಹೆಚ್ಚಿದೆ.
ಕಳೆದ ವಾರಗಳಲ್ಲಿ ಸ್ಪಂದನ ಅವರು ಉತ್ತಮವಾಗಿ ಆಡಿದ್ದರೂ,ಪ್ರತಿ ಬಾರಿ ನಾಮಿನೇಟ್ ಆಗುತ್ತಿದ್ದರು. ಆದರೆ ಎಲಿಮಿನೇಷನ್ ನ ಕೊನೆಯ ವರೆಗು ಬಂದು ಅವರ ಅಭಿಮಾನಿಗಳ ವೋಟ್ ನಿಂದ ಕೂದಲೆಳೆಯಲ್ಲಿ ಸೇವ್ ಆಗುತ್ತಿದ್ದರು.ಈ ವಾರ ಆಚೆಗೆ ಬಂದ್ರೆ ಅಚ್ಚರಿ ಇಲ್ಲ ಅಂತಿದ್ದಾರೆ ಬಿಗ್ ಮನೆ ಅಭಿಮಾನಿಗಳು.