News

ಅರ್ಜುನ್ ಸರ್ಜಾ ಗೆ ಕೊರೊನಾ ಸೋಂಕು ದೃಡ

ಅರ್ಜುನ್ ಸರ್ಜಾ ಗೆ ಕೊರೊನಾ ಸೋಂಕು ದೃಡ
  • PublishedDecember 14, 2021

ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸದ್ದು ಮಾಡಿದ್ದ ಮೀಟು ಸಂಕಷ್ಟದಿಂದ ಪಾರಾಗಿದ್ದರು ಬಹು ಭಾಷಾ ನಟ ಅರ್ಜುನ್ ಸರ್ಜಾ, ಶ್ರುತಿ ಹರಿಹರನ್ ಮಾಡಿದ್ದ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ಸಾಕ್ಷಿ ಆಧಾರಗಳನ್ನು ನ್ಯಾಯಾಲಯಕ್ಕೆ ಒದಗಿಸಲಾಗದಿದ್ದಕ್ಕೆ ನ್ಯಾಯಾಲಯವು ಅರ್ಜುನ್ ಸರ್ಜಾ ಅವರನ್ನು ಆರೋಪ ಮುಕ್ತಗೊಳಿಸಿ ಆದೇಶ ಹೊರಡಿಸಿತ್ತು.

ಆದರೆ ಸರ್ಜಾ ಈಗ ಮತ್ತೊಂದು ಸಮಸ್ಯೆಗೆ ಸಿಲುಕಿದ್ದಾರೆ, ಹೌದು ಬಹು ಭಾಷ ನಟ  ಅರ್ಜುನ್ ಸರ್ಜಾ ಗೆ ಕರೊನಾ ಸೋಂಕು ಕಾಣಿಸಿಕೊಂಡಿದೆ.  ಈ ಸುದ್ದಿಯನ್ನ ಸ್ವತಃ ಅರ್ಜುನ್ ಸರ್ಜಾ ಅವರೆ ಧೃಡಪಡಿಸಿದ್ದು, ನನಗೆ ಕರೊನಾ ಪಾಸಿಟಿವ್ ಬಂದಿದೆ, ಮುಂಜಾಗ್ರಾತ ಕ್ರಮ ಕೈಗೊಂಡಿದ್ದೇನೆ, ಮತ್ತು ಪ್ರತ್ಯೇಕವಾಗಿ ಚಿಕಿತ್ಸೆ ಪಡೆಯುತ್ತಿದೇನೆ,  ಯಾರು ಗಾಬರಿಯಾಗಬೇಡಿ  ನಾನು ಕ್ಷೇಮವಾಗಿದ್ದೀನಿ ನನ್ನ ಸಂಪರ್ಕದಲ್ಲಿದ್ದ ಎಲ್ಲರೂ ಕರೋನಾ ಪರೀಕ್ಷೆಗೆ ಒಳಗಾಗಿ ಎಂದು ಕೇಳಿಕೊಂಡಿದ್ದಾರೆ.

ಎಲ್ಲರೂ ಕ್ಷೇಮವಾಗಿರಿ ತಪ್ಪದೆ ಮಾಸ್ಕ್ ಹಾಕಿಕೊಳ್ಳಿ ಎಂದು ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಇತ್ತೀಚೆಗಷ್ಟೆ ನಟ ಕಮಲ್ ಹಾಸನ್ ಗೂ ಕರೋನಾ ಸೋಂಕು ಕಾಣಿಸಿಕೊಂಡಿತ್ತು, ಸಧ್ಯ ಚೇತರಿಕೆ ಕಂಡು ಮನೆಗೆ ವಾಪಸ್ ಆಗಿದ್ದಾರೆ. ಸದ್ಯ ಓಮೈಕ್ರಾನ್ ರೂಪಾಂತರಿ ಕೊರೊನಾ ಮತ್ತೆ ಹೆಚ್ಚಾಗುತ್ತಿದ್ದು ಎಲ್ಲರೂ ಸುರಕ್ಷಿತವಾಗಿ ಮುನ್ನೆಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದ್ದಾರೆ.

****

Written By
Kannadapichhar

Leave a Reply

Your email address will not be published. Required fields are marked *