ಬ್ಯಾಂಗ್ ಚಿತ್ರದ ಟೀಸರ್ ರಿಲೀಸ್, ಗ್ಯಾಂಗ್ ಸ್ಟರ್ ಪಾತ್ರದಲ್ಲಿ ಗಾಯಕ ರಘು ದೀಕ್ಷಿತ್..!
‘ಬ್ಯಾಂಗ್’ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಮೂಡಿದೆ, ಬ್ಯಾಂಗ್ ಸಿನಿಮಾ ಅತೀ ಶೀಘ್ರದಲ್ಲಿ ದೊಡ್ಡ ಪರದೆ ಮೇಲೆ ತೆರೆ ಕಾಣಲು ಸಿದ್ದವಾಗಿದೆ. ಈ ಹಿಂದೆ ಸಿನಿಮಾವೊಂದರಲ್ಲಿ ಸಣ್ಣ ಪಾತ್ರ ಮಾಡಿದ್ದ ರಘು ದೀಕ್ಷಿತ್ ಈಗ ‘ಬ್ಯಾಂಗ್’ ಎನ್ನುವ ಸಿನಿಮಾದಲ್ಲಿ ಸ್ಟೈಲಿಶ್ ಗ್ಯಾಂಗ್ ಸ್ಟರ್ ಪಾತ್ರವನ್ನು ನಿರ್ವಹಿಸಿದ್ದಾರೆ. ಇದು ಸಿನಿಮಾದಲ್ಲಿ ಪ್ರಮುಖ ಪಾತ್ರವಾಗಿರುವುದು ವಿಶೇಷವಾಗಿದೆ. ಈ ಸಿನಿಮಾದಲ್ಲಿ ರಘು ಜೊತೆ ಶಾನ್ವಿ ಶ್ರೀವಾಸ್ತವ ನಾಯಕಿಯಾಗಿ ನಟಿಸಿದ್ದಾರೆ.
ಟೀಸರ್ ರಿಲೀಸ್ ನ ಸುದ್ದಿ ಗೋಷ್ಠಿಯಲ್ಲಿ ರಘು ಧೀಕ್ಷಿತ್ ಮಾತನಾಡಿ, ‘ನಾನು ಹಾಡು ಹೇಳಿಕೊಂಡು, ನೃತ್ಯ ಮಾಡಿಕೊಂಡು, ಮ್ಯೂಸಿಕ್ ಕಂಪೋಸ್ ಮಾಡಿಕೊಂಡು ಆರಾಮಾಗಿದ್ದೆ. ‘ಬ್ಯಾಂಗ್’ ಸಿನಿಮಾದ ಮ್ಯೂಸಿಕ್ ಡೈರೆಕ್ಟರ್ ರಿತ್ವಿಕ್ ಮುರಳೀಧರ್ ಮತ್ತು ನಿರ್ದೇಶಕ ಶ್ರೀಗಣೇಶ್ ಬಂದು ನೀವು ಇಂತಹದ್ದೊಂದು ಪಾತ್ರ ಮಾಡಬೇಕು ಎಂದಾಗ ನಾನು ಅವರಿಗೆ ‘ಸುಮ್ನೆ ತಲೆ ತಿನ್ನಬೇಡಿ, ಎದ್ದು ಹೋಗಿ’ ಎಂದು ಹೇಳಿದ್ದೆ. ಆದರೆ ಅವರು ಬಿಡದೆ ನನ್ನನ್ನು ಒಪ್ಪಿಸಿ ಈ ಪಾತ್ರ ಮಾಡಿಸುತ್ತಿದ್ದಾರೆ. ಇದೊಂದು ಸ್ಟೈಲಿಶ್ ಪಾತ್ರ. ಒಳ್ಳೆ ಮನಸ್ಸಿರುವ ಡಾನ್ ಪಾತ್ರದಲ್ಲಿ ನಟನೆ ಮಾಡಿರುವುದು ತುಂಬಾ ಖುಷಿ ತಂದಿದೆ ಎಂದರು’,ರಘು ದೀಕ್ಷಿತ್.
ಬ್ಯಾಂಗ್’ ಸಿನಿಮಾದಲ್ಲಿ ನನ್ನದು ಬಹಳ ವಿಶೇಷವಾದ ಪಾತ್ರ. ಅದಕ್ಕಾಗಿ ಕೊಂಚ ದಪ್ಪ ಆಗಿದ್ದೇನೆ. ನಿರ್ದೇಶಕರು ನಾನೇ ಬೇಕು ಎಂದು ಒತ್ತಾಯ ಮಾಡಿದರು. ಯೋಚನೆ ಮಾಡಿ ಒಪ್ಪಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿಒಳ್ಳೆಯ ಪಾತ್ರಗಳು ಸಿಕ್ಕರೆ ಖಂಡಿತ ಒಪ್ಪಿಕೊಳ್ಳುತ್ತೇನೆ. ವಯಸ್ಸಾದ ಮೇಲೆ ಚಿಕ್ಕ ಮಕ್ಕಳಿಗೆ ನಾನು ಇಷ್ಟೆಲ್ಲಾಕೆಲಸಗಳನ್ನು ಮಾಡಿದ್ದೇ ಎಂದು ಹೇಳಬೇಕು.
ರಘು ದೀಕ್ಷಿತ್ ಅವರು ಈ ಸಿನಿಮಾದಲ್ಲಿ ಸ್ಟೈಲಿಶ್ ಡಾನ್ ಪಾತ್ರದಲ್ಲಿರಲಿದ್ದಾರೆ. ಅವರ ಪಾತ್ರ ಪೋಷಣೆ ಮತ್ತು ಸಿನಿಮಾ ಮೇಕಿಂಗ್ ಮೆಕ್ಸಿಕನ್ ಸ್ಟೈಲ್ ನಲ್ಲಿರುತ್ತದೆ. ರಘು ದೀಕ್ಷಿತ್ ಮತ್ತು ಶಾನ್ವಿ ಶ್ರೀವಾಸ್ತವ ಅವರ ಮಧ್ಯೆ ನಡೆಯುವಂತಹ ಘಟನೆಗಳೇ ಬ್ಯಾಂಗ್. ಇದುವರೆಗೂ ನೋಡದೇ ಇರುವ ರೀತಿಯಲ್ಲಿ ರಘು ಅವರು ಕಾಣಿಸಿಕೊಳ್ಳಲಿದ್ದಾರೆ. ಎಂದರು ಬ್ಯಾಂಗ್ ಚಿತ್ರ ನಿರ್ದೇಶಕ ಶ್ರೀಗಣೇಶ್.
****