ಸಿದ್ದಯ್ಯ ಸ್ವಾಮಿ ಬನ್ನಿ ಸಾಂಗ್ ರಿಲೀಸ್
ರವಿ ಸಾರಂಗ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ರಕ್ಕಸಪುರದೊಳ್’ ಸಿನಿಮಾವು ಇನ್ನೇನು ಫೆಬ್ರವರಿ 6 ರಂದು ಬಿಗ್ ಸ್ಕ್ರೀನ್ ಮೇಲೆ ಬರಲು ಸಜ್ಜಾಗಿದೆ. ರಾಜ್ ಬಿ ಶೆಟ್ಟಿ ಯವರು ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಈ ಸಿನಿಮಾದ ಟ್ರೈಲರ್ ಸಖತ್ ಹವಾ ಎಬ್ಬಿಸಿತ್ತು.ಇದೀಗ ಚಿತ್ರದ ಎರಡನೇ ಹಾಡು ಬಿಡುಗಡೆಗೊಂಡಿದೆ. ಸಿದ್ದಯ್ಯ ಸ್ವಾಮಿ ಬನ್ನಿ ಎನ್ನುವ ಹಾಡು ನಿನ್ನೆ ರಿಲೀಸ್ ಆಗಿ ಜನಪ್ರಿಯತೆಯನ್ನು ಹೊಂದುತ್ತಿದೆ. ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನದಲ್ಲಿ ಕ್ರಾಂತಿಯವರ ಸಾಹಿತ್ಯ ಕೇಳುಗರ ಮನ ಮುದಗೊಳಿಸಿದೆ.ಚೆರಿ ಆನ್ ದಿ ಟಾಪ್ ಇದ್ದ ಹಾಗೆ ಜೋಗಿ ಪ್ರೇಮ್ ಅವರು ಹಾಡಿಗೆ ಧನಿಯಾಗಿದ್ದಾರೆ.