ಸಿನಿಮಾ ನೋಡಿ ಥ್ರಿಲ್ ಆದ ಸಿದ್ದರಾಮಯ್ಯ !
ನಟ ಪ್ರಥಮ್ ಅಭಿನಯದ ನಟ ಭಯಂಕರ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ …ನಟಭಯಂಕರ ಸಿನಿಮಾದ ವಿಶೇಷ poster release ರಿಲೀಸ್ ಮಾಡುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಥಮ್ ಕೆಲಸಕ್ಕೆ ಮತ್ತೊಮ್ಮೆ ಬೆನ್ನು ತಟ್ಟಿದ್ದಾರೆ…

ಪ್ರಥಮ್ ಹುಟ್ಟುಹಬ್ಬದ ಪ್ರಯುಕ್ತ ದೊಡ್ಡ ತಾರಗಣದ ಹಾರರ್ ಆಕ್ಷನ್ ಕಾಮಿಡಿ ನಟಭಯಂಕರ ಸಿನಿಮಾದ ತಂಡದೊಂದಿಗೆ ಕಾಲಕಳೆದ ಸಿದ್ಧರಾಮಯ್ಯನವರು ತಂಡಕ್ಕೆ ಶುಭ ಹಾರೈಸಿದ್ದಾರೆ…ನನ್ನ ಹೆಸರಲ್ಲೂ ರಾಮನಿದ್ದಾನೆ ನಿನ್ ಸಿನಿಮಾದಲ್ಲೂ ರಾಮಭಕ್ತ ನ ಹನುಮನ ಗೆಟಪ್…ಚೆನ್ನಾಗಿದೆ! ನಿನ್ನ ಡೈರೆಕ್ಷನ್ ಅಲ್ವೇನಪ್ಪ… ನಾನ್ ನೋಡೇ ನೋಡ್ತೀನಿ ಎನ್ನುವ ಆಶ್ವಾಸನೇ ಕೊಟ್ಟಿದ್ದಾರೆ ಸಿದ್ದರಾಮಯ್ಯ…

ಸಿದ್ದರಾಮಯ್ಯ ಅವರು ಪ್ರಥಮ್ ಸಿನಿಮಾಗೆ ಸಾಥ್ ಕೊಟ್ಟಿರೋದು ಇದೇ ಮೊದಲೇನಲ್ಲ…ಈ ಹಿಂದೆ ಪ್ರಥಮ್ ಅಭಿನಯದ ಹಾಗೂ ಪ್ರತಿ ಸಿನಿಮಾಗೂ ಕ್ಲಾಪ್ ಮಾಡುವ ಮೂಲಕ ಬೆನ್ನಿಗೆ ನಿಂತಿದ್ರು..ಈಗ ನಟ ಭಯಂಕರ ಸಿನಿಮಾ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಪ್ರಥಮ್ ಗೆ ಜೈ ಎಂದಿದ್ದಾರೆ…