new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಅಂದು ಇದೇ ನನ್ನ ಕೊನೆ ಮೇಕಪ್ ಎಂದಿದ್ದೇಕೆ ಶಿವಣ್ಣ..?

ಅಂದು ಇದೇ ನನ್ನ ಕೊನೆ ಮೇಕಪ್ ಎಂದಿದ್ದೇಕೆ ಶಿವಣ್ಣ..?
  • PublishedDecember 20, 2025

45 ಚಿತ್ರವು ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಹೊಂದಲಿದೆ. ಆಗ ಶಿವಣ್ಣ ಮೂತ್ರಕೋಷದ ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆ ಪಡೆಯಲೆಂದು ಯುಎಸ್ಎ ಗೆ ಹೋಗುವ ಮುನ್ನ ಅವರ ಮನಸ್ಥಿತಿ ಹೇಗೆ ಇತ್ತು ಎನ್ನುವುದನ್ನು ಅರ್ಜುನ್ ಜನ್ಯಗೆ ಶಿವಣ್ಣ ಆಪರೇಷನ್ ಆದ ನಂತರದ ದಿನಗಳಲ್ಲಿ ಹೇಳಿದ್ದರಂತೆ. ಜೊತೆಗೆ ಶಿವಣ್ಣ ರಾಜ್ ಬಿ ಶೆಟ್ಟಿಯವರ ಜೊತೆ ಶೂಟಿಂಗ್ ಸೆಟ್ ನಲ್ಲಿ ಏನು ಹೇಳಿದ್ರು ಎನ್ನುವ ಭಾವುಕ ವಿಷಯವನ್ನು ಈ ಸಂದರ್ಶನದ್ಲಲಿ ಅರ್ಜುನ್ ಜನ್ಯ ಹಾಗೂ ರಾಜ್ ಶೆಟ್ಟಿ ಹಂಚಿಕೊಂಡರು.

ಟಿವಿ9 ವಾಹಿನಿಗೆ ಸಂದರ್ಶನ ನೀಡಿದ್ದ ಅರ್ಜುನ್‌ ಜನ್ಯ,ಉಪೇಂದ್ರ ಮತ್ತುರಾಜ್‌ ಬಿ.ಶೆಟ್ಟಿ ಶಿವರಾಜ್‌ ಕುಮಾರ್‌ ಅವರ ಬಗ್ಗೆ ಮಾತನಾಡುತ್ತಾ ಕ್ಲೈಮಾಕ್ಸ್ ಟೈಮ್ ನಲ್ಲಿ ಕನ್ನಡಿ ಮುಂದೆ ಮುಖ ನೋಡಿಕೊಂಡು “ಹೇ ಶಿವರಾಜ್ ಕುಮಾರ್ ಇದೇ ಲಾಸ್ಟ್ ಮೇಕಪ್ ನೀನ್ ಹಾಕೋದು ಎಂದು ಹೇಳಿಕೊಂಡಿದ್ದರಂತೆ.ಈ ವಿಷಯವನ್ನು ನನ್ನ ಬಳಿ ಆಪರೇಷನ್‌ ಆದ ಬಳಿಕ ಇತ್ತೀಚಿಗಷ್ಟೇ ಹಂಚಿಕೊಂಡರು” ಎಂದು ಅರ್ಜುನ್‌ ಜನ್ಯ ಅವರು ಹೇಳಿದರು.

ಇದೇ ಸಮಯದಲ್ಲಿ ರಾಜ್‌ ಬಿ.ಶೆಟ್ಟಿಯವರು 45 ಚಿತ್ರಿಕರಣದ ವೇಳೆ ಶಿವಣ್ಣ ರೆಸ್ಟ್ ಮಾಡಬಹುದಿತ್ತಲ್ವಾ?ಎಂದಾಗ ನಾಡಿದ್ದು ಆಪರೇಷನ್ ಇದೆ, ಮತ್ತೆ ಮರಳಿ ಬರ್ತಿನೋ ಇಲ್ವೋ. ಹಾಗಾಗಿ ಕೆಲಸ ಮುಗಿಸಿ ಕೊಡಬೇಕು ಎನ್ನುವ ಅರ್ಥ ದಲ್ಲಿ ಮಾತನಾಡಿದ್ದನ್ನು ರಾಜ್ ನೆನಪಿಸಿಕೊಂಡರು.

Written By
Kannada Picchar

Leave a Reply

Your email address will not be published. Required fields are marked *