ಹೇಮಂತ್ ರಾವ್ ನಿರ್ದೇಶನದ ‘666 ಆಪರೇಷನ್ ಡ್ರೀಮ್ ಥೀಯೇಟರ್’ ಇದೀಗಾಗಲೇ ಬಹಳ ಸದ್ದು ಮಾಡುತ್ತಿರುವ ಸಿನಿಮಾ. ಟಗರು ಸಿನಿಮಾದ ಬಳಿಕ ಶಿವಣ್ಣ ಹಾಗೂ ಡಾಲಿ ಧನಂಜಯ ಅವರು ಮತ್ತೆ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿರುವುದರಿಂದ ಚಿತ್ರದ ಮೇಲೆ ಸಿನಿಮಾ ಪ್ರಿಯರಿಗೆ ಹೆಚ್ಚು ಕುತೂಹಲ ಮೂಡಿದೆ.ಚಿತ್ರದ ಫಸ್ಟ್ ಲುಕ್ ಗಳನ್ನು ಇದಿಗಾಗಲೇ ಚಿತ್ರ ತಂಡ ಬಿಡುಗಡೆ ಮಾಡಿತ್ತು. ಆದರೆ ಈಗ ಶಿವಣ್ಣ ಅವರ ಪಾತ್ರದ ಹೆಸರನ್ನು ಚಿತ್ರ ತಂಡ ಅನಾವರಣ ಮಾಡಿದೆ. ಏಜೆಂಟ್ ಪ್ರಕಾಶ್ ಪಾತ್ರದಲ್ಲಿ ಶಿವಣ್ಣ ಕಾಣ ಸಿಗಲಿದ್ದಾರೆ. ಪಕ್ಕ ರೆಟ್ರೋ ಸ್ಟೈಲ್ ಸಿನಿಮಾ ಇದಾಗಿದ್ದು,ಮತ್ತೆ ರೆಟ್ರೋ ವೈಬ್ ಗೆ ಪ್ರೇಕ್ಷಕರನ್ನು ಕರೆದು ಕೊಂಡು ಹೋಗುವುದಂತೂ ಪಕ್ಕ ಎಂದು ನೆಟ್ಟರಿಗರು ವ್ಯಕ್ತಪಡಿಸುತ್ತಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *