ಹಿರಿಯ ನಟಿ ಸಾಹುಕಾರ್ ಜಾನಕಿ ಅವರಿಗೆ ಪದ್ಮಶ್ರೀ
ಕಲಾ ಕ್ಷೇತ್ರಕ್ಕೆ ಕೊಡುಗೆ ನೀಡಿದ ಹಿನ್ನಲೆಯಲ್ಲಿ ವಿಕ್ಟರ್ ಬ್ಯಾನರ್ಜಿ, ಸೋನು ನಿಗಮ್, ನಿರ್ದೇಶಕ ಚಂದ್ರಪ್ರಕಾಶ್ ದ್ವಿವೇದಿ, ನಟಿ ಸಾಹುಕಾರ ಜಾನಕಿ ಅವರಿಗೆ 2022ರ ಪದ್ಮ ಗೌರವ ಸಿಕ್ಕಿದೆ. ಸಾಹುಕಾರ್ ಜಾನಕಿ ಅವರ ಕಲಾ ಸೇವೆಗೆ ತಮಿಳು ಕಲಾವಿದೆ ಅಂತ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ ಕೇಂದ್ರ ಸರ್ಕಾರ.ಕನ್ನಡಿಗರಿಗೂ ಚಿರಪರಿಚಿತರಾಗಿರೋ ಸಾಹುಕಾರ್ ಜಾನಕಿ ಅವರಿಗೆ ಗೌರವ ಸಂಧಿರುವುದು ಕನ್ನಡಿಗರಿಗೂ ಖುಷಿ ತಂದಿದೆ. ಡಾ.ರಾಜ್‌ಕುಮಾರ್ ಅವ್ರ ಜೊತೆಗಿನ ಅನೇಕ ಸಿನಿಮಾಗಳಲ್ಲಿ ನಟಿಸಿದ್ರು ಸಾಹುಕಾರ್‌ಜಾನಕಿ ಅವ್ರು.

ನಟಿ ಜಾನಕಿ ಅವರು ಮೂಲತಃ ರಾಜಮಂಡ್ರಿಯವರು, ʻಸಾಹುಕಾರುʼ ಎನ್ನುವ ತೆಲುಗು ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಂತರ ಜಾನಕಿ ಸಾಹುಕಾರ್ ಜಾನಕಿಯಂದೇ ಫೇಮಸ್ ಆದ್ರು… ಆದ್ದರಿಂದಲೇ ಸಾಹುಕಾರ್ ಅವರ ಹೆಸರಿಗೆ ಶಾಶ್ವತವಾಗಿ ಅಂಟಿಕೊಂಡಿತು. ನಂತರದ ದಿನಗಳಲ್ಲಿ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಬಹುಬೇಡಿಕೆ ನಟಿಯಾದ ಜಾನಕಿ, 1954ರಲ್ಲಿ ಬಿಡುಗಡೆಯಾದ ದೇವ ಕನ್ನಿಕಾ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಇದುವರೆಗೂ ಕನ್ನಡ, ತೆಲುಗು, ತಮಿಳಿನ 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.