ಟ್ರೋಲರ್ಸ್ ಗಳಿಗೆ ಖಡಕ್ ಉತ್ತರ ನೀಡಿದ ಸಾನ್ವಿ ಸುದೀಪ್
‘ಮಾರ್ಕ್’ 2025 ರ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದ್ದು 25 ಡಿಸೆಂಬರ್ ಅಂದು ಬಿಡುಗಡೆಗೊಂಡಿತು. ಸಿನಿಮಾವನ್ನು ನೋಡಲು ಸುದೀಪ್ ಅವರ ಮಗಳು ಸಾನ್ವಿ ಸುದೀಪ್ ಅವರು ಚಿತ್ರ ಮಂದಿರಕ್ಕೆ ಬಂದಿದ್ದರು. ಈ ಸಂಧರ್ಭದಲ್ಲಿ ಸಾನ್ವಿಯವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಪ್ರಮಾಣದ ಬ್ಯಾಡ್ ಕಾಮೆಂಟ್ಸ್ ಗಳು ಹರಿದಾಡಲು ಶುರುವಾಯಿತು.
ಈ ಕಾಮೆಂಟ್ಸ್ ಮಾಡುವವರ ಬಗ್ಗೆ ಸುದೀಪ್ ನಿನ್ನೆ ನಡೆದ ಪ್ರೆಸ್ ಮೀಟ್ ಅಲ್ಲಿ ಮಾತನಾಡಿದ್ದರು. “ಆಕೆ ನನ್ನ ಮಗಳು ನಾನೇ ಫೇಸ್ ಮಾಡಿದ್ದೇನೆ ಇನ್ನು ನನ್ನ ಮಗಳು ಫೇಸ್ ಮಾಡಲ್ವಾ “ಎಂದು ಹೇಳಿದ್ದರು.
ಕನ್ನಡ ಚಿತ್ರರಂಗದ ಸ್ಟಾರ್ ಕಿಡ್ ಗಳ ಪೈಕಿ ಸಾನ್ವಿ ಸುದೀಪ್ ಅವರು ಕೂಡ ಒಬ್ಬರು.ತಮ್ಮ ತಂದೆಯ ಮಾರ್ಕ್ ಚಿತ್ರವನ್ನು ನೋಡಲು ಬಂದಿದ್ದ ಅವರ ವಿಡಿಯೋಗಳು ವೈರಲ್ ಆದಾಗ ಅನೇಕರು ಅವರ ದೇಹ ಹಾಗೂ ಉಡುಪಿನ ಬಗ್ಗೆ ಕೆಟ್ಟದಾಗಿ ಕಮೆಂಟ್ಸ್ ಮಾಡಿದ್ದರು.
ಇದೀಗ ಸಾನ್ವಿಯವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ “ನನ್ನ ದೇಹ ಎನ್ನುವುದು ಚರ್ಚೆಗೆ ಇರುವ ವಿಷಯವಲ್ಲ. ಒಂದು ವೇಳೆ ನನಗೆ ನಿಮ್ಮ ಅಭಿಪ್ರಾಯ ಬೇಕಿದ್ದರೆ ನಾನೇ ಕೇಳುತ್ತಿದ್ದೆ” ಎಂದು ಬರೆದು ಹಾಕಿ ಕೊಂಡಿದ್ದಾರೆ.