News

ಸಂತೋಷ್ ಚಿತ್ರ ಮಂದಿರದಲ್ಲಿ ತಾಂತ್ರಿಕ ದೋಷ ‘ನಿನ್ನ ಸನಿಹಕೆ’ ಮೊದಲ ದಿನದ ಶೋ ಸ್ಥಗಿತ..!

ಸಂತೋಷ್ ಚಿತ್ರ ಮಂದಿರದಲ್ಲಿ ತಾಂತ್ರಿಕ ದೋಷ ‘ನಿನ್ನ ಸನಿಹಕೆ’ ಮೊದಲ ದಿನದ ಶೋ ಸ್ಥಗಿತ..!
  • PublishedOctober 8, 2021

ಇಂದು (ಅ8) ಸೂರಜ್ ಗೌಡ ಹಾಗೂ ಧನ್ಯಾ ರಾಮ್​ ಕುಮಾರ್ ಅಭಿನಯದ ‘ನನ್ನ ಸನಿಹಕೆ’ ಚಿತ್ರದ ಬಿಡುಗಡೆ. ಚಿತ್ರತಂಡ ಇದರ ಸಂತಸದಲ್ಲಿರುವಾಗಲೇ ನಿರಾಸೆ ಎದುರಾಗಿದೆ. ಕಾರಣ, ಮುಖ್ಯ ಚಿತ್ರಮಂದಿರವಾದ ಸಂತೋಷ್ ಚಿತ್ರಮಂದಿರದಲ್ಲಿ ತಾಂತ್ರಿಕ ದೋಷದಿಂದ ಪ್ರದರ್ಶನ ಸ್ಥಗಿತವಾಗಿದೆ. ಇದರಿಂದಾಗಿ ಚಿತ್ರಮಂದಿರಕ್ಕೆ ಅಲಂಕರಿಸಿ, ಪ್ರೇಕ್ಷಕರನ್ನು ಸ್ವಾಗತಿಸಲು ತಯಾರಾಗಿದ್ದ ಚಿತ್ರತಂಡ ಹಾಗೂ ಚಿತ್ರದ ಕುರಿತು ನಿರೀಕ್ಷೆಯಿಂದ ಆಗಮಿಸಿದ್ದ ಪ್ರೇಕ್ಷಕರಿಗೆ ನಿರಾಸೆ ಎದುರಾಗಿದೆ.

ಸಂತೋಷ್ ಚಿತ್ರಮಂದಿರದಲ್ಲಿ ಪ್ರದರ್ಶನ ಸ್ಥಗಿತಗೊಂಡಿದ್ದರಿಂದಾಗಿ ಪ್ರೇಕ್ಷಕರು ಮಧ್ಯಾಹ್ನದ ಶೋಗೆ ‘ನವರಂಗ್ ಚಿತ್ರಮಂದಿರ’ದತ್ತ ತೆರಳುತ್ತಿದ್ದಾರೆ. ಚಿತ್ರಮಂದಿರದ ಅಡಚಣೆಯಿಂದ ಚಿತ್ರತಂಡ ಬೇಸರಗೊಂಡಿದೆ. ಮೂರು ದಿನದಿಂದ ಸಮಸ್ಯೆ ಇದ್ದರೂ ಕೂಡ ಥಿಯೇಟರ್ ಮಾಲಿಕರಿಂದ ಚಿತ್ರತಂಡಕ್ಕೆ ಯಾವುದೇ ಮಾಹಿತಿ ನೀಡಿಲ್ಲ. ಚಿತ್ರತಂಡ ಅಲಂಕಾರ ಮಾಡಿಕೊಂಡು ಪ್ರೇಕ್ಷಕರು ಕಿಕ್ಕಿರಿದು ನೆರದಾಗಾಲೂ ಯಾವುದೇ ಮಾಹಿತಿ ನೀಡದಿರುವುದು ಚಿತ್ರತಂಡದ ಬೇಸರಕ್ಕೆ ಕಾರಣವಾಗಿದೆ.

****

Written By
Kannadapichhar

Leave a Reply

Your email address will not be published. Required fields are marked *