ಕಿಚ್ಚು ಹಾಯಿಸಿ ಸಂಭ್ರಮಿಸಿದ ಡೈರೆಕ್ಟರ್ ಪ್ರೇಮ್ ಹಾಗೂ ರಕ್ಷಿತಾ
ನಿರ್ದೇಶಕ ಪ್ರೇಮ್ ಹಾಗೂ ಕ್ರೇಜಿ ಕ್ವೀನ್ ರಕ್ಷಿತಾ ಅವರು ಸಂಕ್ರಾಂತಿಯನ್ನು ನಿನ್ನೆ ಆಚರಿಸಿಕೊಂಡ ಬಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹೌದು, ಪಕ್ಕ ಹಳ್ಳಿಯಲ್ಲಿ ಬೆಳೆದ ಪ್ರೇಮ್ ಅವರು ಎತ್ತನ್ನು ತೊಳೆದು ಪೂಜೆ ಮಾಡಿ ಕಿಚ್ಚು ಹಾಯಿಸಿ ಸಂಕ್ರಾಂತಿಯನ್ನು ಸಂಭ್ರಮಿಸಿದರು. ಜೊತೆಗೆ ತಮ್ಮ ಅಭಿಮಾನಿಗಳಿಗೆ ಸಂಕ್ರಾಂತಿ ಹಬ್ಬದ ಶುಭಾಶಯವನ್ನು ತಿಳಿಸಿರುವ ವಿಡಿಯೋವನ್ನು ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರು. ಇದೀಗ ಆ ವಿಡಿಯೋ ವೈರಲ್ ಆಗುತ್ತಿದೆ.