new updates News ಪಿಚ್ಚರ್ stories ಪಿಚ್ಚರ್ UPDATE

ಸದ್ದಿಲ್ಲದೆ ಡಾಕ್ಟರ್ ಜೊತೆ ಎಂಗೇಜ್ ಆದ ನಟಿ ಸಂಜನಾ ಬುರ್ಲಿ;

ಸದ್ದಿಲ್ಲದೆ ಡಾಕ್ಟರ್ ಜೊತೆ ಎಂಗೇಜ್ ಆದ ನಟಿ ಸಂಜನಾ ಬುರ್ಲಿ;
  • PublishedJanuary 27, 2026


ಪುಟ್ಟಕ್ಕನ ಮಕ್ಕಳು ನಾನ್ ವೆಜ್ , ಶ್ರೀಗಂಧದ ಗುಡಿ ಧಾರಾವಾಹಿ ಮೂಲಕ ಖ್ಯಾತಿ ಪಡೆದಿದ್ದ ಸಂಜನಾ ಬುರ್ಲಿ ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ..

ಹೌದು.. ಸಂಜನಾ ಬುರ್ಲಿ ಅವರು ಕಿರುತೆರೆ ವೀಕ್ಷಕರಿಗೆ ಚಿರಪರಿಚಿತರು. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಅವರು ನಟಿಸಿ ಗಮನ ಸೆಳೆದರು. ಈಗ ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ. ಈ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸಂಜನಾ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದು ಅಭಿಮಾನಿಗಳಿಗೆ ಅಚ್ಚರಿ ತಂದಿದೆ. ಏಕೆಂದರೆ ಸಂಜನಾ ಅವರು ನಿಶ್ಚಿತಾರ್ಥ ಮಾಡಿಕೊಳ್ಳುವ ಬಗ್ಗೆ ಯಾವುದೇ ಸೂಚನೆಯನ್ನು ಕೊಟ್ಟಿರಲಿಲ್ಲ.

ಸಂಜನಾ ಅವರು ಮದುವೆ ಆಗುತ್ತಿರುವ ಹುಡುಗನನ್ನೂ ಕೂಡ ಪರಿಚಯಿಸಿದ್ದಾರೆ. ಸಂಜನಾ ಮದುವೆ ಆಗುತ್ತಿರುವ ಹುಡುಗನ ಹೆಸರು ಸಮರ್ಥ್. ಅವರು ಚನ್ನಗಿರಿ ಮೂಲದವರು. ಅವರು ಎಂಬಿಬಿಎಸ್, ಎಂಡಿ ಓದಿದ್ದು, ವೃತ್ತಿಯಲ್ಲಿ ವೈದ್ಯರಾಗಿದ್ದಾರೆ ಎನ್ನಲಾಗಿದೆ
ಸಂಜನಾ ಅವರು ಪುಟ್ಟಕ್ಕನ ಮಕ್ಕಳು ಬಳಿಕ ಕಲರ್ಸ್​​ನ ಶ್ರೀ ಗಂಧದಗುಡಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಮತ್ತು ನಾನ್ ವೆಜ್ ಅನ್ನೊ ಕನ್ನಡ ಮತ್ತು ತುಳು ಸಿನಿಮಾದಲ್ಲೂ ಕೂಡ ಸಂಜನಾ ನಟಿಸಿದ್ದಾರೆ..

Written By
Kannada Picchar

Leave a Reply

Your email address will not be published. Required fields are marked *