ಸಕ್ಕರೆ ನಾಡಿನಲ್ಲಿ ನಡೆಲಿದೆ ರೈಡರ್ ಚಿತ್ರದ ಪ್ರಿ ರಿಲೀಸ್ ಇವೆಂಟ್
ಬಹುತೇಕ ಕನ್ನಡ ಸಿನಿಮಾಗಳು ರಿಲೀಸ್ ಗೂ ಮುನ್ನ ಪ್ರಿ ರಿಲೀಸ್ ಇವೆಂಟ್ ಮಾಡುವುದು ರೂಡಿಯಾಗಿದೆ. ಪ್ರತಿ ಪ್ರಿ ರಿಲೀಸ್ ಇವೆಂಟ್ ಗಳು ಸಾಮಾನ್ಯವಾಗಿ ಬೆಂಗಳೂರಿನಲ್ಲೆ ನಡೆಯುತ್ತವೆ ಆದರೆ ರೈಡರ್ ಚಿತ್ರ ಇದಕ್ಕೆ ಅಪವಾದ ಯಾಕೆಂದರೆ ‘ರೈಡರ್’ ಚಿತ್ರದ ಪ್ರಿರಿಲೀಸ್ ಇವೆಂಟ್ ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯುತ್ತಿದೆ, ಹೌದು ಸ್ಯಾಂಡಲ್ ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ಅಭಿನಯದ ‘ರೈಡರ್’ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.ಈಗಾಗಲೇ ‘ರೈಡರ್’ ಹಾಡುಗಳು ಹಾಗೂ ಟ್ರೈಲರ್‌ನಿಂದ ಬೇಜಾನ್ ಸದ್ದು ಮಾಡುತ್ತಿದೆ. ಸದ್ಯ ‘ರೈಡರ್’ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದು, ಸಕ್ಕರೆ ನಾಡಿನಲ್ಲಿ ಅದ್ದೂರಿ ಕಾರ್ಯಕ್ರಮ ನಡೆಸಲು ಮುಂದಾಗಿದೆ.
ನಿಖಿಲ್ ಕುಮಾರಸ್ವಾಮಿಗೆ ಮಂಡ್ಯ ಜಿಲ್ಲೆ ರಾಜಕೀಯ ಭವಿಷ್ಯಕ್ಕೆ ತಳಹದಿ ಹಾಕಿಕೊಟ್ಟಿರುವ ಕ್ಷೇತ್ರ ಕೂಡ ಹೌದು ಅಲ್ಲಿ ನಿಖಿಲ್ ಗೆ ಮಂಡ್ಯದಲ್ಲಿ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಇದ್ದಾರೆ ಹಾಗಾಗಿ ರೈಡರ್ ಚಿತ್ರದ ಪ್ರಿ ರಿಲೀಸ್ ಇವೆಂಟ್ ಅನ್ನು ಮಂಡ್ಯದಲ್ಲಿ ನಡೆಸಲು ಪ್ರಮುಖ ಕಾರಣ. ‘ರೈಡರ್’ ನಿಖಿಲ್ ಕುಮಾರ್‌ಗೆ ವಿಶಿಷ್ಟ ಸಿನಿಮಾ. ಯಾಕಂದ್ರೆ, ಈ ಸಿನಿಮಾದಲ್ಲಿ ಕೇವಲ ಲವ್‌ಸ್ಟೋರಿ, ಆಕ್ಷನ್, ಸೆಂಟಿಮೆಂಟ್ ಅಷ್ಟೇ ಅಲ್ಲ. ಇವೆಲ್ಲದರ ಜೊತೆ ಇದೇ ಮೊದಲ ಬಾರಿಗೆ ಕ್ರೀಡಾಪಟುವಾಗಿ ನಿಖಿಲ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ. ಬಾಸ್ಕೆಟ್ ಬಾಲ್ ಆಟಗಾರನಾಗಿ ನಿಖಿಲ್ ಅಭಿನಯಿಸುತ್ತಿದ್ದು, ಯುವರಾಜನ ಅಭಿಮಾನಿಗಳು ಈ ಸಿನಿಮಾ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ. ಹೀಗಾಗಿ ಈ ಬಾರಿ ಮಂಡ್ಯದಲ್ಲಿ ನಿಖಿಲ್ ಅಭಿಮಾನಿಗಳಿಗಾಗಿ ‘ರೈಡರ್’ ಪ್ರಿ ರಿಲೀಸ್ ಇವೆಂಟ್ ಮಾಡಲು ನಿರ್ಧರಿಸಿದ್ದಾರೆ.
ಡಿಸೆಂಬರ್ 24 ರಿಂದ ಚಿತ್ರ ತೆರೆಗೆ ಬರುತ್ತಿದ್ದು, ಅದಕ್ಕೂ ಮೊದಲು ನಿಖಿಲ್ ರಾಜಕೀಯ ಕ್ಷೇತ್ರವಾಗಿರುವ ಮಂಡ್ಯದಲ್ಲಿಯೇ ಪ್ರಿ ರಿಲೀಸ್ ಈವೆಂಟ್ ಆಯೋಜಿಸಲು ಚಿತ್ರತಂಡ ತೀರ್ಮಾನಿಸಿದೆ. ಸದ್ಯದಲ್ಲೇ ಕಾರ್ಯಕ್ರಮದ ದಿನಾಂಕ ನಿಗದಿಯಾಗಲಿದೆ.
‘ರೈಡರ್’ ಸಿನಿಮಾವನ್ನು ಆಡಿಯೋ ಸಂಸ್ಥೆ ಲಹರಿ ಸಹ ನಿರ್ಮಾಣ ಮಾಡಿದೆ. “ನಮ್ಮ ಲಹರಿ ಸಂಸ್ಥೆ ಈ ಹಿಂದೆ ಮಹಾ ಕ್ಷತ್ರಿಯ, ಗಣೇಶನ ಗಲಾಟೆ ಹಾಗೂ ತೆಲುಗಿನ ರೋಜ ಚಿತ್ರಗಳನ್ನು ನಿರ್ಮಾಣ ಮಾಡಿತ್ತು. ಈಗ ಶಿವನಂದಿ ಎಂಟರ್ಟೈನ್ಮೆಂಟ್ ಜೊತೆಗೂಡಿ ರೈಡರ್ ಚಿತ್ರವನ್ನು ನಿರ್ಮಾಣ ಮಾಡಿದ್ದೇವೆ. ನಮ್ಮ ಅಣ್ಣ ಮನೋಹರ ನಾಯ್ಡು ಅವರ ಮಕ್ಕಳಾದ ಚಂದ್ರು ಹಾಗೂ ನವೀನ್ ಈ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಹಾಡುಗಳು ಈಗಾಗಲೇ ಗೆದ್ದಿದ್ದು, ಸಿನಿಮಾ ಕೂಡ ಯಶಸ್ವಿಯಾಗುತ್ತೆ” ಅಂತಾರೆ ಲಹರಿ ವೇಲು.
****