‘ರೈಡರ್’ ನಿಖಿಲ್ ಆಕ್ಷನ್ ನೋಡಿ ಫಿದಾ ಆದ ಪ್ಯಾನ್ಸ್
ಯುವರಾಜ, ರಾಜಕಾರಣಿ ನಿಖಿಲ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ‘ರೈಡರ್’ ಚಿತ್ರದ ಟ್ರೇಲರ್ ಬಿಡುಗಡೆ ಇಂದು 6.45 ಕ್ಕೆ ಲಹರಿ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಆಗಿದೆ, ಟ್ರೇಲರ್ ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ವೀವ್ಸ್ ಪಡೆದುಕೊಂಡಿದೆ. ಆ ಮೂಲಕ ನಿಖಿಲ್ ಅವರನ್ನು ಬೆಳ್ಳಿ ಪರದೆ ಮೇಲೆ ನೋಡಲು ಕಾತರರಾಗಿದ್ದಾರೆ. ಚಿತ್ರ ಡಿಸೆಂಬರ್ 24ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
‘ರೈಡರ್’ ಆ್ಯಕ್ಷನ್ ಚಿತ್ರವಾಗಿದ್ದು, ಈಗಾಗಲೇ ಚಿತ್ರದ ಟೀಸರ್ ಮತ್ತು ಹಾಡುಗಳು ಧೂಳೆಬ್ಬಿಸಿವೆ. ಇಂದು ಬಿಡುಗಡೆ ಆಗಿರುವ ಟ್ರೇಲರ್ ನಲ್ಲಿ ನಿಖಿಲ್ ಅವರ ಖಡಕ್ ಡೈಲಾಗ್ಸ್, ಭರ್ಜರಿ ಆ್ಯಕ್ಷನ್ ದೃಶ್ಯಗಳನ್ನು ನೋಡಿದಮೇಲಂತೂ ನಿಖಿಲ್ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಗರುಡ ರಾಮ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿರುವುದು, ಇಬ್ಬರ ನಡುವಿನ ಕಾಳಗವನ್ನು ನೋಡೋಕೆ ನಿಖಿಲ್ ಅಭಿಮಾನಿಗಳು ಕಾತರರಾಗಿದ್ದಾರೆ.
ಸೀತಾರಾಮ ಕಲ್ಯಾಣ’ ಚಿತ್ರದ ಮೂಲಕ ಲವರ್ ಬಾಯ್ ಆಗಿ ಸ್ಯಾಂಡಲ್ವುಡ್ ಪ್ರೇಕ್ಷಕರನ್ನು ರಂಜಿಸಿದ್ದ ನಿಖಿಲ್ ಕುಮಾರಸ್ವಾಮಿ ‘ರೈಡರ್’ ಚಿತ್ರದಲ್ಲಿ ಬಾಸ್ಕೆಟ್ ಬಾಲ್ ಪ್ಲೇಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಿಖಿಲ್ ಗೆ ನಾಯಕಿಯಾಗಿ ಯುವ ನಟಿ ಕಾಶ್ಮೀರಿ ಪರ್ದೇಸಿ ನಟಿಸಿದ್ದು, ಮತ್ತೊಬ್ಬ ನಾಯಕಿಯಾಗಿ ಅನುಷಾ ರೈ ಅಭಿನಯಿಸಿದ್ದಾರೆ.
****