ಚಂದನವನದಲ್ಲಿ ಈ ವರ್ಷ ಸ್ಟಾರ್ ಹೆಂಡ್ತೀರ ಕಾರುಬಾರೇ ಜೋರು…
By Pallavi N Raj
2025 ಮುಗಿಯಲು ಇನ್ನೇನೂ ಬೆರಳೆಣಿಕೆ ದಿನಗಳು ಅಷ್ಟೆ ಬಾಕಿ ಇರೋದು. ಈ ವರ್ಷ ನಮ್ಮ ಚಂದನವನದಲ್ಲಿ ಸಾಕಷ್ಟು ಸಿನಿಮಾಗಳು ಬಂದವು. ಅದರಲ್ಲಿ ಇಯರ್ ಎಂಡ್ ಸಮಯದಲ್ಲಿ ಸ್ಟಾರ್ ನಟರ ಸಿನಿಮಾಗಳು ಬಂದು ಯಶಸ್ಸು ಕಂಡ್ವು. ಆ ಯಶಸ್ಸಿನಹಿಂದೆ ಅವರಿಗಿಂತ ಹೆಚ್ಚು ಗುರುತಿಸಿಕೊಂಡಿದ್ದು ನಟರ ಪತ್ನಿಯರು.
ಹೌದು.. ದಚ್ಚು ಬೆನ್ನ ಹಿಂದೆ ವಿಜಿ, ಕಿಚ್ಚನ ಬ್ಯಾಕ್ ಬೋನಾಗಿ ಪತ್ನಿ ಸುಪ್ರಿಯಾ, ರಿಷಬ್ ಗೆ ಪ್ರಗತಿ ಸಾಥ್, ವಿನೋದ್ ಪ್ರಭಾಕರ್ ಗೆ ನಿಶಾ, ಉಪ್ಪಿ ಹಿಂದೆ ಪ್ರಿಯಾಂಕ, ಶಿವಣ್ಣನಿಗೆ ಗೀತಕ್ಕ, ಅಪ್ಪು ಹಿಂದೆ ಅಶ್ವಿನಿ, ಗಣೇಶ್ ಹಿಂದೆ ಶಿಲ್ಪಾ ಹೀಗೆ ಹೆಸರು ಹೇಳ್ತಾ ಹೋದ್ರೆ ಲಿಸ್ಟೇ ಕೊಡಬೇಕಾಗುತ್ತೆ.
ಅಂದಹಾಗೆ ಈ ವರ್ಷ ಗೆದ್ದಿರೋ ಸ್ಟಾರ್ ನಟರ ಸಿನಿಮಾದಲ್ಲಿ ಅವ್ರ ಮಡದಿಯರ ಜವಾಬ್ದಾರಿ ಹೆಚ್ಚಿದೆ.. ದರ್ಶನ್ ಡೆವಿಲ್ ಹಿಂದೆ ದೊಡ್ಡ ಶಕ್ತಿಯಾಗಿ ಎಂದಿಗೂ ಫಿಲ್ಡಿಗಿಳಿದು ಗಂಡನ ಸಿನಿಮಾ ಪ್ರಚಾರ ಮಾಡದ ವಿಜಯಲಕ್ಷ್ಮಿ ಡೆವಿಲ್ ಸಿನಿಮಾ ಪ್ರಮೋಷನ್ ಮಾಡಿದ್ರು ಸಿನಿಮಾ ದೊಡ್ಡ ಯಶಸ್ಸು ಪಡೆಯಿತು.
ಕಾಂತಾರ ಚಾಪ್ಟರ್ ೧ ಸಾಕಷ್ಟು ವಿವಾದಗಳಿಂದ ಹೆಸರು ಮಾಡಿದ್ದ ಕಾಂತಾರಕ್ಕೆ ಹಾಗೂ ರಿಷಬ್ ಗೆ ಶಕ್ತಿ ತುಂಬಿದ್ದು ಮಡದಿ ಪ್ರಗತಿ ಮಕ್ಕಳ ಜವಾಬ್ದಾರಿ ಜೊತೆ ಸಿನಿಮಾಕ್ಕೆ ಏನಾದ್ರು ಕೊಡುಗೆ ಕೆಡಬೇಕು ಅಂತ ಪ್ರಗತಿ ಸಿನಿಮಾಕ್ಕೆ ದೊಡ್ಡ ಶಕ್ತಿಯಾದ್ರು.
ಶಿವಣ್ಣನ ಸಿನಿಮಾ ಕಷ್ಟ ಸುಖ ಎಲ್ಲದರಲ್ಲೂ ದೊಡ್ಡ ಶಕ್ತಿಯಾಗಿದ್ದು ಗೀತಕ್ಕ, ಮಾರ್ಕ್ ಸಿನಿಮಾ ಮೂಲಕ ಮೊದಲ ಬಾರಿಗೆ ಪ್ರೋಡ್ಯೂಸರ್ ಆದ ಕಿಚ್ಚನ ಮಡದಿ ಸುಪ್ರಿಯಾ ಸುದೀಪ್ ಹಿಂದೆ ದೊಡ್ಡ ಶಕ್ತಿಯಾದ್ರು,
ಇನ್ನು.. ಉಪ್ಪಿ ಹಿಂದೆ ಪ್ರಿಯಾಂಕ, ಮರಿ ಟೈಗರ್ ಹಿಂದೆ ಮಡದಿ ನಿಶಾ ತನ್ನ ಗಂಡನ ಜವಾಬ್ದಾರಿ ಹೋತ್ರು, ಹೀಗೆ ಹೆಸರೇಳ್ತಾ ಹೋದ್ರೆ ಸಾಕಷ್ಟು ಜೋಡಿಯ ಹೆಸರೇ ಸಿಗುತ್ತೆ. ಒಟ್ನಲ್ಲಿ ಹೀಗೆ ಒಂದಾಗಿ ಒಳ್ಳೋಳ್ಳೆ ಸಿನಿಮಾ ಮಾಡಿ ಅನ್ನೋದು ಅಭಿಮಾನಿಗಳ ಹಾರೈಕೆ ಆಗಿದೆ.