“ಅವತಾರ ಪುರುಷ” ಲಡ್ಡು ಸಾಂಗ್ ಸಖತ್ ವೈರಲ್!
ಸ್ಯಾಂಡಲ್ ವುಡ್ ನ ಅಧ್ಯಕ್ಷ ಖ್ಯಾತಿಯ ಕಾಮಿಡಿ ಕಿಂಗ್ ಶರಣ್ ಮತ್ತು ಚುಟು ಚುಟು ಹುಡುಗಿ ಆಶಿಕಾ ರಂಗನಾಥ್ ಜೋಡಿಯಾಗಿ ಅಭಿನಯಿಸಿರುವ, ಸಿಂಪಲ್ ಸುನಿ ನಿರ್ದೇಶನದ ‘ಅವತಾರ ಪುರುಷ’ ಸಿನಿಮಾ ಡಿಸೆಂಬರ್ 10 ಕ್ಕೆ ರಾಜಾದ್ಯಂತ ತೆರೆಗೆ ಬರುತ್ತಿದೆ.
‘ಅವತಾರ ಪುರುಷ’ ಚಿತ್ರದ ಎರಡನೇ ಹಾಡು ಈ ಲಡ್ಡು ಬಂದು ಬಾಯಿಗ್ ಬಿತ್ತಾ’ ಪುಷ್ಕರ್ ಫಿಲಮ್ಸ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದ್ದು ಸಕತ್ ವೈರಲ್ ಆಗಿದೆ. ಈ ಹಾಡು ತುಂಬಾ ಡಿಫರೆಂಟ್ ಆಗಿ ಮೂಡಿಬಂದಿದ್ದು ಮೆನ್ ವಿಲ್ ಬಿ ಮೆನ್ ಜಾಹಿರಾತುಗಳನ್ನೆ ಹಾಡಿನ ರೀತಿ ಚಿತ್ರೀಕರಿಸಿ ವಿಭಿನ್ನ ಶೈಲಿಯಲ್ಲಿ ಮಾಡಿದ್ದಾರೆ ನಿರ್ದೇಶಕ ಸಿಂಪಲ್ ಸುನಿ. ಜಾಹಿರಾತಿನಲ್ಲಿ ಸಿನಿಮಾ ಹಾಡುಗಳನ್ನು ಬಳಸುವುದು ಸಾಮಾನ್ಯ, ಆದರೆ ಇಲ್ಲಿ ಜಾಹಿರಾತುಗಳನ್ನೆ ಸೇರಿಸಿ ಸಿನಿಮಾ ಹಾಡನ್ನಾಗಿ ಮಾಡಿದ್ದಾರೆ ನಿರ್ದೇಶಕರು.
ಇಂಪೀರಿಯಲ್ ಬ್ಲೂ, ಫೆವಿ ಕ್ವಿಕ್, ಹ್ಯಾಪಿಡೆಂಟ್ ಮತ್ತು ಸೆಂಟರ್ ಪ್ರೆಶ್ ಜಾಹಿರಾತುಗಳನ್ನೆ ಸೇರಿಸಿ ಮಾಡಿರುವ ಹಾಡಿಗೆ ಸಾಹಿತ್ಯ ರಚಿಸಿದ್ದಾರೆ ಸುನಿ, ನಿಹಾಲ್ ತಾವ್ರೊ ಕಂಠಸಿರಿಯಲ್ಲಿ ‘ಲಡ್ಡೂ ಬಂದು ಬಾಯಿಗೆ ಬಿತ್ತಾ’ ಹಾಡು ಮೂಡಿಬಂದಿದ್ದು, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಒಟ್ಟಾರೆ ಹಾಡು ಕಾಮಿಡಿ ಕಂಟೆಂಟ್ ಓರಿಯಂಟೆಡ್ ಶೈಲಿಯಲ್ಲಿ ವಿಭಿನವಾಗಿ ಮೂಡಿ ಬಂದಿದ್ದು ಈಗಾಗಲೆ ಒಂದೇ ದಿನದಲ್ಲಿ ನಾಲ್ಕು ಲಕ್ಷ ವೀವ್ಸ್ ಪಡೆದಿದೆ.
ಎರಡು ಭಾಗಗಳಲ್ಲಿ ಸಿನಿಮಾ ತೆರೆಕಾಣಲಿದ್ದು,2 ಹಾಡುಗಳನ್ನು ಹೊರತುಪಡಿಸಿ ಎರಡೂ ಭಾಗದ ಚಿತ್ರೀಕರಣವೂ ಪೂರ್ಣಗೊಂಡಿದೆ, ಮೊದಲ ಭಾಗಕ್ಕೆ ಅಷ್ಟದಿಗ್ಬಂಧನ ಮಂಡಲಕ ಹಾಗೂ ಎರಡನೇ ಪಾರ್ಟ್‌ಗೆ ತ್ರಿಶಂಕು ಎನ್ನುವ ಟ್ಯಾಗ್‌ಲೈನ್ ಇಡಲಾಗಿದೆ. ಉಳಿದಿರುವ ಎರಡು ಹಾಡುಗಳನ್ನು ವಿದೇಶದಲ್ಲಿ ಶೂಟ್ ಮಾಡುವ ಪ್ಲಾನ್ ಇದೆ ಎಂದಿದ್ದಾರೆ ಚಿತ್ರದ ನಿರ್ಮಾಪಕರಾದ ಪುಷ್ಕರ್ ಮಲ್ಲಿಕಾರ್ಜನಯ್ಯ.
“ಲಡ್ಡು“ ಹಾಡಿನಲ್ಲಿ ಶರಣ್ ಹಾಗೂ ಆಶಿಕಾ ಕಾಂಬಿನೇಷನ್ ಕೆಮಿಸ್ಟ್ರಿ ಹಾಡಿನಲ್ಲಿ ಸಖತ್ ವರ್ಕೌಟ್ ಆಗಿದೆ, ಜೊತೆಗೆ ಚಿತ್ರದಲ್ಲಿ ಶರಣ್ ಅವರನ್ನು ಹಿಂದೆಂದೂ ಕಾಣದ ರೀತಿಯಲ್ಲಿ ಮತ್ತು ಹೊಸ ಅವತಾರದಲ್ಲಿ ಕಾಣಬಹುದಾಗಿದೆ. ಮುಖ್ಯವಾಗಿ ಸಿಕ್ಕಾಪಟ್ಟೆ ಶಾಕ್‌ನೊಂದಿಗೆ ಭಯಮೂಡಿಸುವಂತಹ ಬ್ಲ್ಯಾಕ್ ಮ್ಯಾಜಿಕ್ ಚಿತ್ರಕಥೆ ಈ ಚಿತ್ರದಲ್ಲಿದೆ. ಚಿತ್ರದ ಮೊದಲ ಭಾಗ ತೆರೆಕಂಡು 101 ನೇ ದಿನಕ್ಕೆ ಭಾಗ 2 ನ್ನು ಬಿಡುಗಡೆ ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದಾರೆ ನಿರ್ಮಾಪಕರಾದ ಪುಷ್ಕರ್ ಮಲ್ಲಿಕಾರ್ಜುನಯ್ಯ.
****